ಮೋದಿ ಸರ್ಕಾರ ಪತನ ಎನ್ನುವುದು ಹಗಲು ಕನಸು: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವಿಜಯಪುರ:

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪತನವಾಗಲಿದೆ ಎಂದು ಪ್ರತಿಪಕ್ಷದವರು ಹಗಲು ಕನಸು ಕಾಣುತ್ತಿದ್ದಾರೆ, ಅವರ ಕನಸು ನನಸಾಗಲು ಸಾಧ್ಯವಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಆಗಸ್ಟ್ ತಿಂಗಳಲ್ಲಿ ಮೋದಿ ಸರ್ಕಾರ ಪತನವಾಗಲಿದೆ ಎಂದು ಬಿಹಾರ ಮಾಜಿ ಸಿಎಂ ಲಾಲು ಪ್ರದಾದ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲಾಲು ಪ್ರಸಾದ ಯಾದವ್‌ಗೆ ನರಿ ಬುದ್ದಿ ಇದೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ, ರಾಹುಲ್ ಗಾಂಧಿ ಒಬ್ಬರು ಅಪ್ರಬುದ್ಧ ನಾಯಕ. ಅರೆ, ಬೆರೆ ಬೆಂದಿರುವ ನಾಯಕ. ಅವರಿಗೆ ಈ ದೇಶದ ಜನರ ಭಾವನೆ, ಸಂಸ್ಕೃತಿ ಗೊತ್ತಿಲ್ಲ. ಹಿಂದೂಗಳ ಬಗ್ಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದರು. ಅದನ್ನು ನಾವು ಈಗಾಗಲೇ ಖಂಡಿಸಿದ್ದೇವೆ, ಈಗಲೂ ಖಂಡಿಸುತ್ತೇವೆ. ಅವರು ಕ್ಷಮೆಯಾಚನೆ ಮಾಡಬೇಕು ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!