ಉಡುಪಿಯಲ್ಲಿ ಉರುಳಿದ ಮರ: ರಿಟ್ಜ್, ಬುಲೆಟ್ ಜಖಂ, ಓರ್ವಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶನಿವಾರ ಮಧ್ಯಾಹ್ನದ ವೇಳೆ ಉಡುಪಿ ನಗರದ ಬ್ರಹ್ಮಗಿರಿ ಸರ್ಕಲ್ ನಿಂದ ಅಂಬಲಪಾಡಿಗೆ ತೆರಳುವ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದು, ಒಂದು ರಿಡ್ಜ್ ಕಾರು, ಒಂದು ಬುಲೆಟ್ ಬೈಕ್ ಜಖಂ ಆಗಿದ್ದು, ಬುಲೆಟ್ ಬೈಕ್‌ನ ಸವಾರ ಗಾಯಗೊಂಡಿದ್ದಾರೆ.

ಸತೀಶ್ ಗಾಯಗೊಂಡ ಸವಾರ, ಅವರನ್ನು ನಗರದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ, ಮೆಸ್ಕಾಂ ಸಿಬ್ಬಂದಿಗಳು ಹಾಗು ಸ್ಥಳೀಯರು ಕೂಡಿಕೊಂಡು ಮರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!