ಹೊಸ ದಿಗಂತ ವರದಿ, ಚಿತ್ರದುರ್ಗ:
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಗನೆ ತನ್ನ ತಂದೆಯನ್ನು ಹತ್ಯೆ ಮಾಡಿ, ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ವರವು ಕಾವಲು ಬಳಿ ಇಂದು ಮುಂಜಾನೆ ನಡೆದಿದೆ.
ಸೂರಯ್ಯ(55) ಮಗನಿಂದಲೇ ಕೊಲೆಯಾದ ಮೃತ ವ್ಯಕ್ತಿ. ಚಳ್ಳಕೆರೆ ತಾಲೂಕಿನ ಹೊಸುರು ತಾಂಡ ಗ್ರಾಮದ ನಿವಾಸಿಯಾದ ಸೂರಯ್ಯ ತನ್ನ ಮಗ ಮೋಹನನೊಂದಿಗೆ ವಾಸವಿದ್ದು, ನಿನ್ನೆ ಸಂಜೆ ಚಳ್ಳಕೆರೆ ತಾಲೂಕಿನ ವರವು ಕಾವಲಿಗೆ ಹೋಗಿದ್ದಾರೆ. ನಿನ್ನೆ ತಡರಾತ್ರಿ ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಜಗಳ ನಡೆದಿದ್ದು, ಇಂದು ಮುಂಜಾನೆ ಮೋಹನ್ ಕುಡಿದ ಅಮಲಿನಲ್ಲಿ ತಂದೆ ಸೂರಯ್ಯ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಚಳ್ಳಕೆರೆ ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಸಮೀವುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.