ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳ ಕನಸಿನಲ್ಲಿ ಶಿವ ದೇವರು ಬಂದಿದ್ದಾನೆ ಎಂದು ಇಡೀ ಕುಟುಂಬದವರು ಸೇರಿ ದೇಗುಲದಲ್ಲಿರುವ ಶಿವಲಿಂಗವನ್ನು ಕಳವು ಮಾಡಿದ್ದಾರೆ.
ಗುಜರಾತ್‌ನ ದ್ವಾರಕಾದ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ ಆರೋಪದ ಮೇಲೆ ಕುಟುಂಬದ ಎಂಟು ಸದಸ್ಯರನ್ನು ಬಂಧಿಸಲಾಗಿದೆ.
ದ್ವಾರಕಾದಲ್ಲಿರುವ ಪ್ರಾಚೀನ ಭೀದ್ಭಂಜನ್ ಮಹಾದೇವ್ ದೇವಾಲಯದಿಂದ ಶಿವಲಿಂಗವನ್ನು ಕದ್ದಿದ್ದರು, ಅಧಿಕಾರಿಗಳು ಆರಂಭದಲ್ಲಿ ಅದನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ಶಂಕಿಸಿದ್ದರು. ದ್ವಾರಕಾದಿಂದ 500 ಕಿಲೋಮೀಟರ್ ದೂರದಲ್ಲಿರುವ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಕುಟುಂಬವೊಂದು ಅದನ್ನು ಕದ್ದಿರುವುದು ಬಳಿಕ ತಿಳಿದುಬಂದಿತ್ತು.
ಮಗಳ ಕಾಣಿಸಿಕೊಂಡ ಭೀದ್ಭಂಜನ್ ಮಹಾದೇವ್ ದೇವಸ್ಥಾನದ ಶಿವಲಿಂಗವನ್ನು ಮನೆಗೆ ತಂದು ಪ್ರತಿಷ್ಠಾಪಿಸುವುದರಿಂದ ಅವರ ಸಮಸ್ಯೆಗಳು ಕೊನೆಗೊಂಡು ಸಮೃದ್ಧಿ ತರುತ್ತದೆ ಎಂದು ನಂಬಿದ್ದರು ಎಂಬುದು ಪೊಲೀಸರಿಗೆ ಬಳಿಕ ತಿಳಿಯಿತು.