ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಬಾಸ್ ಕನ್ನಡ 11’ರ ಶೋ (Bigg Boss Kannada 11) ಇದೀಗ 100ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಈಗ ಫ್ಯಾಮಿಲಿ ರೌಂಡ್ ಶುರುವಾಗಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು, ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಟಾಸ್ಕ್ ಗೆದ್ದವರಿಗೆ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕೊಡಲಾಗುತ್ತದೆ.
ಮನೆಯಲ್ಲಿ ‘ಬಿಗ್ ಬಾಸ್’ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ, ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ , ಒಂದು ಚಿತ್ರವನ್ನು ಜೋಡಿಸುವ ಟಾಸ್ಕ್ ಅನ್ನು ಫುಲ್ ಟೆನ್ಷನ್‌ನಲ್ಲಿ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮುಖ್ಯದ್ವಾರ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾರೆ.
ಈ ವೇಳೆ ತ್ರಿವಿಕ್ರಮ್, ಅವರ ತಾಯಿಯ ಆಶೀರ್ವಾದವನ್ನು ಎಲ್ಲಾ ಸ್ಪರ್ಧಿಗಳು ಪಡೆದರು. ತ್ರಿವಿಕ್ರಮ್ ಅವರ ತಾಯಿಯನ್ನು ಭವ್ಯಾ ತಬ್ಬಿಕೊಂಡು ಖುಷಿಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಾ ಕೃಷ್ಣನ ತರ ಇದ್ದೀರಿ ಎಂದು ತ್ರಿವಿಕ್ರಮ್ ತಾಯಿ ಭವ್ಯಾರನ್ನು ಮೆಚ್ಚಿದ್ದಾರೆ. ಅವರ ಮಾತಿನಿಂದ ಭವ್ಯಾ ನಾಚಿ ನೀರಾಗಿದ್ದಾರೆ.
View this post on Instagram