ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ರಯಾಗರಾಜ್ನಲ್ಲಿನಡೆಯುತ್ತಿರುವ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮನೆಯ ಸದಸ್ಯನೊಬ್ಬ ನಿಧನರಾಗಿದ್ದಾರೆ ಅಂದುಕೊಂಡ ಕುಟುಂಬ, ದಿನಕಾರ್ಯಕ್ಕೆ ಮುಂದಾಗಿತ್ತು. ಆದರೆ ಆತ, ತಿಥಿ ಕಾರ್ಯದ ದಿನ ಮನೆಗೆ ಎಂಟ್ರಿ ನೀಡಿ ಅಚ್ಚರಿ ಮೂಡಿಸಿದ್ದಾನೆ.
ಖುಂಟಿ ಗುರು ಬದುಕಿ ಬಂದಿರುವ ವ್ಯಕ್ತಿ.
ಜನವರಿ 28 ರಂದು ಮೌನಿ ಅಮಾವಾಸ್ಯೆಯ ಸ್ನಾನಕ್ಕೆ ಹೋಗ್ತೀನಿ ಎಂದು ಗುರು ಹೊರಟಿದ್ದ. ಬಳಿಕ ಆತ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಆತನ ಸಂಪರ್ಕಿಸಲು ನಡೆಸಿದ್ದ ಪ್ರಯತ್ನ ಕೂಡ ವಿಫಲವಾಗಿತ್ತು. ಹೀಗಾಗಿ ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡಿದ್ದಾನೆ ಎಂದು ಕುಟುಂಬ ನಂಬಿತ್ತು.
ಹೀಗಾಗಿ 2 ವಾರ ಕಳೆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತ ನಿಧನ ಆಗಿರಬಹುದು ಅಂದುಕೊಂಡ ಕುಟುಂಬ, ಕಾರ್ಯಗಳನ್ನ ನೆರವೇರಿಸಿತ್ತು. ಆದ್ರೆ ಅಚ್ಚರಿಯಂತೆ ಕೊನೆಯ 13ನೇ ದಿನದ ತಿಥಿ ಕಾರ್ಯದ ವೇಳೆ ಖುಂಟಿ ಗುರು ಮನೆಗೆ ಎಂಟ್ರಿ ನೀಡಿದ್ದಾನೆ. ಆತನ ನೋಡುತ್ತಿದ್ದಂತೆಯೇ ಮನೆಯವರೆಲ್ಲ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಖುಂಟಿ ಗುರು ಮೂಲತಃ ಪ್ರಯಾಗರಾಜ್ ನಿವಾಸಿ. ಪ್ರಯಾಗರಾಜ್ನ ಝೀರೋ ರೋಡ್ ಏರಿಯಾದ ಚಹ್ಚಂದ್ ಗಾಲಿ ನಿವಾಸಿ. ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.