ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತ ಸಂಯೋಜಕ ಹಿಮೇಶ್ ರೇಶಮಿಯಾ ತಂದೆ ವಿಪಿನ್ ರೇಶಮಿಯಾ ನಿಧನರಾಗಿದ್ದಾರೆ.
87 ವಯಸ್ಸಿನ ವಿಪಿನ್ ಹಿಮೇಶ್ ರೇಶಮಿಯಾ ಉಸಿರಾಟದ ಸಮಸ್ಯೆಗಳು ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಸೆ.18ರಂದು ಮುಂಬೈನ ಕೋಕಿಲಾಬೆನ್ ಧಿರೂಭಾಯಿ ಅಂಬಾನಿ ಆಸ್ಪತ್ರಗೆ ದಾಖಲಾಗಿದ್ರು, ಅದೇ ದಿನ ರಾತ್ರಿ 8.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಬೈನ ಜುಹುವಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.