ಮಂಡ್ಯ ಬಾಡೂಟಕ್ಕೆ ಫೇಮಸ್: ಹೊಸ ತೊಡಕು ದಿನವೇ ಮಠ ಮಂಥನಕ್ಕೆ ಮುಂದಾದ ‘ಮೈತ್ರಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೆ ಮೈತ್ರಿ ನಾಯಕರು ಸಮಗ್ರ ರಣತಂತ್ರ ರೂಪಿಸಿದ್ದಾರೆ. ಯುಗಾದಿ ಹಬ್ಬದ ನಂತರ ಮಠ ಮಂಥನಕ್ಕೆ ತಯಾರಿ ನಡೆಸುತ್ತಿದ್ದಾರೆ. ಆರಂಭದಲ್ಲಿ ಮೈಸೂರು ಭಾಗದ ಮತಗಳನ್ನು ಸೆಳೆಯಲು ಬಿಜೆಪಿ ನಾಯಕರು ಸಮಗ್ರ ಕಾರ್ಯತಂತ್ರ ರೂಪಿಸಿದ್ದಾರೆ.

ಬಿಜೆಪಿ-ಜೆಡಿಎಸ್ ನಾಯಕರು ಲೋಕಸಭೆ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಿದ್ದಾರೆ. 28 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲಲು ಯೋಜನೆ ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಮತಗಳೇ ಹೆಚ್ಚಾಗಿರುವ ಪ್ರಮುಖ ಕ್ಷೇತ್ರಗಳನ್ನು ಗುರಿಯಾಗಿಸಲು ಬಯಸಿದ್ದಾರೆ. ಒಕ್ಕಲಿಗ ಸಮುದಾಯದ ಮುಖಂಡರಾದ ಆರ್.ಅಶೋಕ್, ಎಚ್.ಡಿ.ಕುಮಾರಸ್ವಾಮಿ, ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಇಂದು ಬೆಂಗಳೂರಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಹಾಗಾಗಿ ಹಳೇ ಮೈಸೂರು ಭಾಗದಲ್ಲಿ ಪ್ರಬಲ ಒಕ್ಕಲಿಗ ಮತಗಳು ನಿರ್ಣಾಯಕವಾಗಿದ್ದ ಕ್ಷೇತ್ರವನ್ನು ಗೆಲ್ಲಲು ರಣತಂತ್ರ ಹೆಣೆದಿದ್ದಾರೆ.

ಮಂಡ್ಯ ಒಕ್ಕಲಿಗರ ಕೋಟೆ. ಬಾಡೂಟಕ್ಕೆ ಸಖತ್ ಫೇಮಸ್. ಇದೇ ಬಾಡೂಟವನ್ನೆ ಬಳಸಿಕೊಂಡು ಮತ ಸೆಳೆಯಲು ಮೈತ್ರಿ ನಾಯಕರು ಮುಂದಾಗಿದ್ದಾರೆ. ಹೊಸ ತೊಡಕು ಮೂಲಕ ಮೈತ್ರಿ ನಾಯಕರು ಒಕ್ಕಲಿಗರ ಮತ ಸೆಳೆಯಲು ರಣತಂತ್ರ ಹೆಣೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಬಾಡೂಟ ಬಳಸಿಕೊಂಡು ಮತಬೇಟೆ ಮಾಡುವರಂತೆ,,,ಪಾಪ ಮುಗ್ದ ಬಡ ಮತದಾರರು ಒಂದು ಊಟಕ್ಕೆ ಐದು ವರ್ಷದ ತಮ್ಮ ಭವಿಷ್ಯವನ್ನು ರಾಜಕಾರಣಿಗಳ ಜೋಲಿ ಒಳಗೆ ಹಾಕಿಬಿಡುವರು,,, ಚುನಾವಣೆ ನಂತರ ಅದೇ ರಾಜಕಾರಣಿ,,ಮತದಾರರ ಭವಿಷ್ಯ ತುಂಬಿರುವ ಜೋಲಾ ಉಠಾಕೆ ಚಲ್ ಜಾಯೇಗಾ,, ಮತ್ತೆ ಐದು ವರ್ಷಗಳ ನಂತರ ಅದೇ ಹಾಡು ಅದೇ ರಾಗ,,

LEAVE A REPLY

Please enter your comment!
Please enter your name here

error: Content is protected !!