ಕನ್ನಡದ ಖ್ಯಾತ ಕಿರುತೆರೆ ನಿರೂಪಕಿ ಅಪರ್ಣಾ ವಸ್ತಾರೆ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಖ್ಯಾತ ಕಿರುತೆರೆ ನಿರೂಪಕಿ ಅಪರ್ಣಾ ವಸ್ತಾರೆ ವಿಧಿವಶರಾಗಿದ್ದಾರೆ. ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನಿರೂಪಕಿಯಾಗಿ ಮಾತ್ರವಲ್ಲದೆ ನಟಿಯಾಗಿಯೂ ಪರಿಚಿತರು. ಅವರು ಚಲನಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿನ ಪಾತ್ರಗಳಿಗೆ ಪ್ರಸಿದ್ಧರಾದವರು. ಅಪರ್ಣಾ ಅವರು ಅನೇಕ ಸಣ್ಣ ಪರದೆಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ನಮ್ಮ ಮೆಟ್ರೋ ಅನೌನ್ಸ್​ಮೆಂಟ್​ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.

ಚಂದನ ವಾಹಿನಿಯಲ್ಲಿ ಅಪರ್ಣಾ ಹಲವು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ನಂತರ, ಅವರು ಭಾರತ ಸರ್ಕಾರದ ವಿವಿಧ ಭಾರತಿ ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದರು.

ದೂರದರ್ಶನದಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಪರ್ಣಾ ನಟಿಸಿದ್ದಾರೆ. ಅವರು 2015 ರಲ್ಲಿ ಸೃಜನ್ ಲೋಕೇಶ್ ಅವರ ನಿರ್ದೇಶನದಲ್ಲಿ ಪ್ರಾರಂಭವಾದ ಮಜಾ ಟಾಕೀಸ್ ಶೋನಲ್ಲಿ ಅಪರ್ಣಾ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!