ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ಖ್ಯಾತ ನಟ ಮಾರಿಮುತ್ತು ಅವರು ಡಬ್ಬಿಂಗ್ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
58 ವರ್ಷದ ಮಾರಿಮುತ್ತು ಅವರು ಚೆನ್ನೈನ ಸ್ಟುಡಿಯೋದಲ್ಲಿ ಡಬ್ಬಿಂಗ್ ವೇಳೆ ಏಕಾಏಕಿ ಕುಸಿದುಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರಿಮುತ್ತು ಅವರು ನಿಧನರಾಗಿದ್ದಾರೆ.
ಇತ್ತೀಚೆಗಷ್ಟೇ ತೆರೆಕಂಡ ಜೈಲರ್ ಸಿನಿಮಾದಲ್ಲಿ ಮಾರಿಮುತ್ತು ವಿಲನ್ ಪಾತ್ರ ಮಾಡಿದ್ದರು. ಅಭಿಮಾನಿಗಳು ಮಾರಿಮುತ್ತು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Condolences! Your work has been impeccable and irreplaceable. Rest in peace #Marimuthu pic.twitter.com/cdT2LgThwY
— Sun Pictures (@sunpictures) September 8, 2023