March 3, 2026
Tuesday, March 3, 2026
spot_img

CINE | ಅಭಿಮಾನಿಗಳೇ, ಪ್ಲೀಸ್‌ ರಿಸೆಪ್ಷನ್‌ಗೆ ಬರಬೇಡಿ, ದೂರದಿಂದಲೇ ನಮ್ಮನ್ನು ಹರಸಿ ಎಂದ ʼವಿರೋಷ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಭಿಮಾನಿಗಳೇ ಪ್ಲೀಸ್‌ ನಮ್ಮನ್ನು ನೋಡೋದಕ್ಕೆ ರಿಸೆಪ್ಷನ್‌ಗೆ ಬರಬೇಡಿ. ನೀವು ಕುಳಿತ ಜಾಗದಿಂದಲೇ ನಮಗೆ ಒಳ್ಳೆಯದಾಗಲಿ ಎಂದು ಹರಸಿ ಸಾಕು. ನಮಗೆ ಒಳ್ಳೆಯದಾಗುತ್ತದೆ ಎಂದು ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಾಳೆ ಅದ್ಧೂರಿ ರಿಸೆಪ್ಷನ್‌ ನಡೆಯಲಿದೆ. ಇಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ, ಸಿನಿ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ. ಬಿಗಿ ಭದ್ರತೆ ಕೂಡ ಇದೆ. ಈ ಸಂದರ್ಭದಲ್ಲಿ ಯಾರಿಗೆಲ್ಲ ರಿಸೆಪ್ಷನ್‌ ಕಾರ್ಡ್‌ ತಲುಪಿದೆಯೋ ಅವರಿಗೆ ಮಾತ್ರ ಬರಲು ಅವಕಾಶ ಇದೆ.

ಕಾರ್ಡ್‌ ಇಲ್ಲದವರು ದಯವಿಟ್ಟು ಬರಬೇಡಿ, ಮನೆಯಿಂದಲೇ ಹರಸಿ ಎಂದಿದ್ದಾರೆ. ಇದೀಗ ಆರತಕ್ಷತೆಯ ಸ್ಥಳದ ಮಾಹಿತಿ ಬಹಿರಂಗ ಆಗಿರುವ ಕಾರಣ ಸಾವಿರಾರು ಮಂದಿ ಅಭಿಮಾನಿಗಳು ಸಹ ಆಗಮಿಸುವ ಸಾಧ್ಯತೆ ಇದೆ. ಇದರಿಂದ ಭದ್ರತೆ ಕಠಿಣವಾಗಲಿದೆ. ಇದೀಗ ರಶ್ಮಿಕಾ ಮತ್ತು ವಿಜಯ್ ಮೊದಲೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ನಿಮ್ಮ ಸುರಕ್ಷತೆ ಮತ್ತು ಸಂತೋಷ ನಮಗೆ ಮುಖ್ಯ. ನಿಮ್ಮ ಆಶೀರ್ವಾದ ಮತ್ತು ಬೆಂಬಲಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಮತ್ತು ಈ ಆಚರಣೆಯನ್ನು ಎಲ್ಲರಿಗೂ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಇರಿಸಲು ನಮಗೆ ಸಹಾಯ ಮಾಡುವಲ್ಲಿ ನಿಮ್ಮ ಸಹಕಾರವನ್ನು ನಾವು ಕೋರುತ್ತೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !