ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಂಗ್ ವಿರಾಟ್ ಕೊಹ್ಲಿ ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಗುಣಗಾನ ಮುಂದುವರಿದಿದ್ದು, ಕಿಂಗ್ ಯಾವತ್ತಿದ್ರೂ ಕಿಂಗ್ ಎಂದು ಕೂಗಿ ಹೇಳ್ತಿದ್ದಾರೆ.
ಇದರ ಬೆನ್ನಲ್ಲೇ ಆಟದ ಮಧ್ಯ ವಿರಾಟ್ ಪಾಕ್ ತಂಡದ ಬೌಲರ್ ನಸೀಮ್ ಷಾ ಅವರ ಶೂ ಲೇಸ್ ಕಟ್ಟಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ರೂ ಸರಳತೆ ಅವರಲ್ಲಿ ಇನ್ನೂ ಇದೆ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. 2025 ರ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕ್ ಬ್ಯಾಟಿಂಗ್ ವೇಳೆ ನಾನ್-ಸ್ಟ್ರೈಕರ್‌ನಲ್ಲಿದ್ದ ನಸೀಮ್ ಷಾ, ಕೊಹ್ಲಿಯನ್ನು ತನ್ನ ಶೂಲೇಸ್‌ಗಳನ್ನು ಕಟ್ಟಲು ಕೇಳಿಕೊಂಡರು. ಇದಕ್ಕೆ ಭಾರತದ ಮಾಜಿ ನಾಯಕ ಒಪ್ಪಿಗೆ ಸೂಚಿಸಿ ಶೂಲೇಸ್ ಕಟ್ಟಿದ್ದಾರೆ. ಈ ಅಪರೂಪದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.