ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ತನ್ನ ತವರಿನಲ್ಲಿ ಭರ್ಜರಿ ಓಪನಿಂಗ್ ಮಾಡಿದೆ. ಪಂಜಾಬ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ 199 ರನ್ಗಳ ಟಾರ್ಗೆಟ್ ನೀಡಿದ್ದಾರೆ.
ಆರಂಭಿಕರಾಗಿ ಮೈದಾನಕ್ಕಿಳಿದ ಶುಭ್ಮನ್ ಗಿಲ್ ಗಮನಾರ್ಹ ಪ್ರದರ್ಶನ ನೀಡಿದರು. ಅವರು 48 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 89 ರನ್ ಗಳಿಸಿದರು.
ಅತ್ತ ಸಾಯಿ ಸುದರ್ಶನ್ ಕೂಡ 19 ಎಸತಕ್ಕೆ 6 ಬೌಂಡರಿ ಹೊಡೆಯುವ ಮೂಲಕ 33 ರನ್ ಬಾರಿಸಿದ್ದಾರೆ. ಆದರೆ ಹರ್ಷದ್ ಪಟೇಲ್ ಎಸೆತಕ್ಕೆ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನು ಕೇನ್ ವಿಲಿಯಂಸನ್ 22 ಎಸೆತಕ್ಕೆ 26 ರನ್ ಬಾರಿಸಿ ಹರ್ಪ್ರೀತ್ಗೆ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆದರು.
ಒಟ್ಟಾರೆಯಾಗಿ ಇವತ್ತಿನ ಮ್ಯಾಚ್ ಯಾರು ಗೆಲ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.