ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡರು. ಅಲ್ಲದೆ ಮೊದಲ ಓವರ್ ಎಸೆಯಲು ಮೊಹಮ್ಮದ್ ಸಿರಾಜ್ಗೆ ಚೆಂಡು ನೀಡಿದರು. ಇಡೀ ಸ್ಟೇಡಿಯಂ ಈ ಆಟಕ್ಕಾಗಿ ಕಾಯುತ್ತಾ ಇತ್ತು. ಗುರು-ಶಿಷ್ಯರ ಮುಖಾಮುಖಿಗೆ ಇಡೀ ಸ್ಟೇಡಿಯಂ ಸಾಕ್ಷಿಯಾಗಿತ್ತು.
ಮೊಹಮ್ಮದ್ ಸಿರಾಜ್ ಎಸೆದ ಪ್ರಥಮ ಓವರ್ನ ಮೊದಲ ಎಸೆತವನ್ನು ಫಿಲ್ ಸಾಲ್ಟ್ ಎದುರಿಸಿದರು. ಅಲ್ಲದೆ ಒಂದು ರನ್ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ನೀಡಿದರು. ಆದರೆ 2ನೇ ಎಸೆತ ಎಸೆಯುವ ಮುನ್ನ ಮೊಹಮ್ಮದ್ ಸಿರಾಜ್ ಭಾವುಕರಾಗಿ ಕಂಡು ಬಂದರು. ಬೌಲಿಂಗ್ ಮಾಡಲೆಂದು ಬಂದು ಆಗದೇ ಹಿಂದೆ ಹೋದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ 7 ವರ್ಷಗಳ ಕಾಲ ಆಡಿದ್ದರು. ಈ ವೇಳೆ ಸಿರಾಜ್ ಬೆಂಬಲಕ್ಕೆ ನಿಂತವರು ವಿರಾಟ್ ಕೊಹ್ಲಿ. ಕೊಹ್ಲಿಯ ಸಂಪೂರ್ಣ ಬೆಂಬಲದೊಂದಿಗೆ ನಾನು ಈ ಮಟ್ಟಕ್ಕೆ ತಲುಪಿದ್ದೇನೆ ಎಂದು ಹಲವು ಬಾರಿ ಸಿರಾಜ್ ಹೇಳಿಕೊಂಡಿದ್ದರು.
View this post on Instagram