ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಜಾರ್ಜಿಯಾ ಮೆಲೋನಿ ಪ್ರಮಾಣ ವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಜಾರ್ಜಿಯಾ ಮೆಲೋನಿ (45) ಪ್ರಮಾಣ ವಚನ ಸ್ವೀಕರಿಸಿದರು. ಇವರ ಜೊತೆಗೆ 24 ಸದಸ್ಯರ ಸಚಿವ ಸಂಪುಟವೂ ಕೂಡ ಪ್ರಮಾಣ ವಚನ ಸ್ವೀಕರಿಸಿತು. ಕೆಲವು ದಿನಗಳ ಹಿಂದೆ ನಡೆದ ಇಟಲಿಯ ರಾಷ್ಟ್ರೀಯ ಚುನಾವಣೆಯಲ್ಲಿ ಮೆಲೋನಿ ನೇತೃತ್ವದ ಬ್ರದರ್ಸ್ ಆಫ್ ಇಟಲಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಒಟ್ಟು ಮತಗಳ ಪೈಕಿ 43 ಶೇಕಡಕ್ಕಿಂತ ಹೆಚ್ಚಿನ ಮತಗಳನ್ನು ಒಕ್ಕೂಟ ಪಡೆದಿದ್ದರೆ, ಮೆಲೊನಿ ಅವರ ಪಕ್ಷಕ್ಕೆ ಶೇ 26.37ರಷ್ಟು ಮತಗಳು ಬಂದಿವೆ.

ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾದ ಇಟಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಪ್ರಧಾನಿಯಾಗಿರುವುದರಿಂದ ಅವರು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯಾದ ಮೆಲೋನಿ, ಚುನಾವಣಾ ಫಲಿತಾಂಶದ ನಂತರ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ, “ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯತೆ ಬಹಳಷ್ಟಿದೆ. ನಾವೀಗ ಆರಂಭಿಕ ಹಂತದಲ್ಲಿದ್ದೇವೆ. ನಾಳೆಯಿಂದ ನಾವೇನು ​​ಎಂಬುದನ್ನು ಸಾಬೀತುಪಡಿಸಬೇಕು,’’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!