ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಸಂಸತ್ತಿಗೆ ವಿದಾಯ ಹೇಳಿದರು. ಈ ವೇಳೆ ಅವರು ತಮ್ಮ ಕುರ್ಚಿಯನ್ನು ಎತ್ತಿಕೊಂಡು ಲಘುವಾಗಿ ನಾಲಿಗೆ ಚಾಚುತ್ತಾ ಹೊರಗೆ ಹೋಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆನಡಾದಲ್ಲಿ ಸಂಸದರೊಬ್ಬರು (MP) ಸಂಸತ್ತನ್ನು ತೊರೆದಾಗ ತಮ್ಮ ಕುರ್ಚಿಯನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು ಎಂಬ ಸಂಪ್ರದಾಯವಿದೆ. ಟೊರೊಂಟೊ ಸನ್‌ನ ರಾಜಕೀಯ ಅಂಕಣಕಾರ ಬ್ರಿಯಾನ್ ಲಿಲ್ಲಿ ಪ್ರತಿಕ್ರಿಯಿಸಿ, ಇದು ಒಂದು ಕುತೂಹಲಕಾರಿ ಸಂಪ್ರದಾಯವಾಗಿದೆ ಎಂದಿದ್ದಾರೆ.
ಸಂಸದರೊಬ್ಬರು ಹೌಸ್ ಆಫ್ ಕಾಮನ್ಸ್ ಅನ್ನು ತೊರೆದಾಗ, ಅವರು ತಮ್ಮ ಕುರ್ಚಿಯನ್ನು ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ. ಇದು ಅದ್ಭುತ ಸಂಪ್ರದಾಯ, ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ಟ್ರುಡೊ ಅವರ ಈ ಚಿತ್ರ ಸ್ವಲ್ಪ ವಿಭಿನ್ನವಾಗಿದೆ. ಇದರೊಂದಿಗೆ, ಇದು ಮುಂಬರುವ ಚುನಾವಣೆಯ ಸೂಚನೆಯೂ ಆಗಿರಬಹುದು ಬರೆದಿದ್ದಾರೆ.
ಜಸ್ಟಿನ್ ಟ್ರುಡೊ ಜನವರಿ 6, 2025 ರಂದು ಪ್ರಧಾನ ಮಂತ್ರಿ ಮತ್ತು ಲಿಬರಲ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆಗೆ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ವಸತಿ ಬಿಕ್ಕಟ್ಟು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ.
ಮಾರ್ಕ್ ಕಾರ್ನಿ ಕೆನಡಾದ ಹೊಸ ಪ್ರಧಾನ ಮಂತ್ರಿ
ಮಾರ್ಕ್ ಕಾರ್ನಿ ಅವರನ್ನು ಭಾನುವಾರ ಲಿಬರಲ್ ಪಕ್ಷದ ನೂತನ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ಅವರು ಕೆನಡಾದ ಮುಂದಿನ ಪ್ರಧಾನಿಯಾಗಲು ಸಿದ್ಧತೆ ನಡೆಸುತ್ತಿದ್ದಾರೆ.