ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಕಾತೂರ ಗ್ರಾ.ಪಂ ಪಂಚಾಯತಿ ವ್ಯಾಪ್ತಿಯ ನಂದಿಪುರದ ಗ್ರಾಮದ ಗದ್ದೆಯಲ್ಲಿ ರೈತನೊಬ್ಬನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ನಂದಿಪುರದ ಶಿವಪ್ಪ ನಾಗಪ್ಪ ವಡ್ಡರ್ (೬೦) ವಿದ್ಯುತ್ ತಗುಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಈತನು ಸೋಮವಾರ ಬೆಳಿಗ್ಗೆ ಮನೆಯಿಂದ ಗದ್ದೆಗೆ ತೆರಳಿದ್ದರು ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಗದ್ದೆಗೆ ಹೋಗಿ ಹುಡುಕಾಡಿದ್ದಾರೆ. ಆ ಸಂದರ್ಭದಲ್ಲಿ ಶಿವಪ್ಪ ಶವವಾಗಿ ದೊರೆತಿದ್ದಾನೆ.
ರೈತ ಶಿವಪ್ಪ ಅವರ ಪಕ್ಕದ ಗದ್ದೆಯ ಮೋಹನ್ ಪಾಟೀಲ್ ಎಂಬುವವರು, ತಮ್ಮ ಬೋರವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಮೃತ ವ್ಯಕ್ತಿಯ ಗದ್ದೆಯಲ್ಲಿರೋ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಕಾಡು ಪ್ರಾಣಿ ಹಾಗೂ ಮನುಷ್ಯರು ವಿದ್ಯುತ್ ತಗಲಿದರೆ ಪ್ರಾಣಾಪಾಯ ಆಗುತ್ತದೆ ಎಂದು ತಿಳದಿದ್ದರು ನಿರ್ಲಕ್ಷ್ಯತನದಿಂದ ತಮ್ಮ ಭತ್ತದ ಗದ್ದೆಗೆ ಹರಿಸಿದ ವಿದ್ಯುತ್ ತಂತಿತಾಗಿದ್ದರಿಂದ ತಂದೆ ಸಾವನ್ನಪ್ಪಿದ್ದಾರೆ ಎಂದು ಮೃತನ ಪುತ್ರ ನಾಗರಾಜ ವಡ್ಡರ ಅವರು ಮೋಹನ ಪಾಟೀಲ ಎಂಬುವರ ವಿರುದ್ಧ ಪೊಲೀಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.