ಹೊಸದಿಗಂತ ವರದಿ, ರಾಯಚೂರು :
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಸಂವಿಧಾನಿಕ ಪದವನ್ನು ಬಳಸಿರುವ ಭ್ರಷ್ಟಾಚಾರ, ದುರ್ನಡತೆ ಇಂದ ನಡೆದುಕೊಂಡಿರುವ ಲೋಕಾಯುಕ್ತ ವಿಶೇಷ ತನಿಖಾದಳದ ಎಡಿಜಿಪಿ ಎಂ.ಚoದ್ರಶೇಖರ ಅವರ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕಾನೂನು ಜರುಗಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯುವಂತೆ ಜೆಡಿಎಸ್ ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಓರ್ವ ಸರ್ಕಾರಿ ಅಧಿಕಾರಿಯಾಗಿ ಅಧಿಕೃತ ದಾಖಲೆಯಾಗುವ ಪತ್ರದಲ್ಲಿ ಜನಪ್ರತಿನಿಧಿಗಳಿಗೆ ಸಂಬoಧಿದoತೆ ಯಾವ ರೀತಿ ಶಬ್ಧ ಬಳಕೆ ಮಾಡಬೇಕು ಎನ್ನುವುದು ಅರಿವಿರುತ್ತದೆ. ಈ ರೀತಿ ಶಬ್ಧ ಬಳಕೆ ಮಾಡಿದ್ದಾರೆ ಎಂದರೆ ಇದು ಉದ್ದೇಶಪೂರ್ವಕವಾಗಿ ಬಳಕೆ ಮಾಡಿದ್ದು ಎನ್ನವುದು ಮೇಲ್ನೋಟಕ್ಕೆ ಯಾರಿಗಾದರೂ ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಅಧಿಕಾರಿಯ ವಿರುದ್ಧ ಸರ್ಕಾರ ಕಾನೂನು ಕ್ರಮಕ್ಕೆ ಮೂಮದಾಗಬೇಕು ಎಂದರು.
ಜನಪ್ರತಿನಿಧಿಗಳಿಗೆ ಹೇಗೆ ಮಾತನಾಡಬೇಕು. ಅವರೊಂದಿಗೆ ಹೇಗೆ ವರ್ತನೆ ಮಾಡಬೇಕೆಂದು ಅವರಿಗೆ ಹೇಗೆ ಗೌರವ ಕೊಡಬೇಕೆನ್ನುವ ಕುರಿತು ಸಂವಿಧಾನದಲ್ಲಿನೇ ಉಲ್ಲೇಖಿಸಲಾಗಿದೆ. ಈ ಅಧಿಕಾರಿಗೆ ಯಾವುದೇ ತಿಳಿದಂತೆ ಕಾಣುತ್ತಿಲ್ಲ. ಇಂತಹವರು ಸರ್ಕಾರದ ಉನ್ನದ ಹುದ್ದೆಯಲ್ಲಿ ಇರುವುದಕ್ಕೆ ಅರ್ಹತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಲ್ಲವಾದರೆ ಇವರಿಗೆ ರಾಜ್ಯ ಸರ್ಕಾರ ಈ ರೀತಿ ಪತ್ರವನ್ನು ಬರೆಯುವಂತೆ ಹೇಳಿದೆಯೋ ಏನೋ ಅನ್ನುವ ಸನುಮಾನ ಮೂಡುತ್ತಿದೆ ಎಂದರು.
ಲೋಕಾಯುಕ್ತ ಅಧಿಕಾರಿ ಅವರ ಪತ್ನಿಯ ಹೆಸರಲ್ಲಿ ಬಹುಮಹಡಿ ಕಟ್ಟಡ ಕಟ್ಟುತ್ತಿರುವ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿಯವರು ದಾಖಲೆ ಸಹಿತವಾಗಿ ಬಹಿರಂಗಪಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ತನಿಖೆಯನ್ನು ಮಾಡಬೇಕು. ಹಾಗೂ ಇವರು ಹಿಮಾಚಲ ಪ್ರದೇಶದ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವರು. ರಾಜ್ಯಕ್ಕೆ ಬಂದು ೨೦ ವರ್ಷಗಳಿಗೂ ಅಧಿಕ ಕಾಲಾವಧಿ ಆಗಿದ್ದರಿಂದ ಇವರನ್ನು ತಕ್ಷಣ ವರ್ಗಾವಾಣೆ ಮಾಡಿ ಇಲ್ಲವೆ ಇವರನ್ನು ಅಮಾನತ್ ಮಾಡಿ ಅವರ ವಿರುದ್ಧ ಬಂದಿರುವ ದೋಷಾರೋಪಗಳ ಕುರಿತು ತನಿಖೆಯನ್ನು ಮಾಡಬೇಕು ಇಲ್ಲದಿದ್ದರೆ ಜೆಡಿಎಸ್ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಓರ್ವ ಲೋಕಾಯುಕ್ತ ಅಧಿಕಾರಿಯಾಗಿರುವ ಎ.ಚಂದ್ರಶೇಖರ ಅವರು ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿ ವರ್ತನೆಯನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ರಾಜ್ಯಪಾಲರ ಕಚೇರಿಯನ್ನೇ ತನಿಖೆ ಮಾಡುವುದಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಪರಮಾನಿಗೆಯನ್ನು ಕೇಳುತ್ತಾರೆ ಎಂದರೆ ಅವರಿಗೆ ಸಂವಿಧಾನದಲ್ಲಿನ ಕಾನೂನುಗಳ ಅರಿವಿಲ್ಲದಂತೆ ಕಂಡುಬರುತ್ತದೆ. ಇಂತಹ ಅಧಿಕಾರಿಗಳನ್ನು ತಕ್ಷಣ ಅಮಾನತ್ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮಾಜಿ ಶಾಸಕ ರಜಾ ವೆಂಕಟಪ್ಪ ನಾಯಕ, ಗುಡ್ಡನಗೌಡ, ಶಿವು ನಾಯಕ, ನಾಗರಾಜಗೌಡ, ಶಿವಶಂಕರ ಸೇರಿದಂತೆ ಇತರರಿದ್ದರು.