ಹೊಸದಿಗಂತ ವರದಿ ಕಲಬುರಗಿ:
ಇದೀಗ ಮಳೆಗಾಲ ವಿಷಜಂತುಗಳ ಬಗೆಗೆ ತುಸು ಜಾಗ್ರತೆಯಿರಲಿ, ಎಲ್ಲೆಂದರಲ್ಲಿ ಹಾವು, ಚೇಳುಗಳ ಹಾವಳಿ ಹೆಚ್ಚಾಗಿರುತ್ತದೆ. ಅಂತೆಯೇ ಹೊಲದಲ್ಲಿ ಕೆಲಸ ಮಾಡುವಾಗ ವಿಷಕಾರಿ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊಡೆಬಿರನಳ್ಳಿ ಗ್ರಾಮದಲ್ಲಿ ನಡೆದಿದೆ.
35 ವರ್ಷದ ನರಸಮ್ಮ ಮೃತ ದುರ್ದೈವಿ. ಶುಕ್ರವಾರ ಸಂಜೆ ಹೊತ್ತಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೆಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.