September 16, 2026
Wednesday, September 16, 2026
spot_img

ರೈತರಿಗೆ ತಪ್ಪದ ಕಾಡು ಪ್ರಾಣಿಗಳ ಕಾಟ: ದಾಂಡೇಲಿಯಲ್ಲಿ ರೈತನ ಮೇಲೆ ಕಾಡು ಹಂದಿ ದಾಳಿ

ಹೊಸದಿಗಂತ ವರದಿ ದಾಂಡೇಲಿ

ದಾಂಡೇಲಿ ತಾಲೂಕಿನ ಆಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಸಕಲಗದಲ್ಲಿ ಕಾಡು ಹಂದಿಯೊಂದು ರೈತನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಸ್ಥಳೀಯ ಕೇರವಾಡ ಗ್ರಾಮದ ರೈತ ಪರಶುರಾಮ ಅರ್ಜುನ ಕದಂ (ವ.45) ಎಂಬವರೇ ಗಾಯಗೊಂಡ ರೈತ. ಇವರು ದನಕರುಗಳಿಗೆ ಮೇವು ತರಲೆಂದು ಸಕಲಗದಲ್ಲಿರುವ ಕಬ್ಬಿನ ಗದ್ದೆಗೆ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ಕಾಡು ಹಂದಿ ದಾಳಿ ನಡೆಸಿದೆ.

ದಾಳಿಯಿಂದ ಸೊಂಟ ಹಾಗೂ ಕಾಲಿಗೆ ಗಾಯವಾಗಿದೆ. ಗಾಯಗೊಂಡ ಇವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರತರಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !