ಕೋಲಾರದಲ್ಲಿ ಚೆಂಡು ಹೂವನ್ನು ರಸ್ತೆ ಬದಿ ಸುರಿದು ರೈತರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಲು ಸಾಲು ಹಬ್ಬಗಳು ಮುಗಿದ ಬಳಿಕ ಚೆಂಡು ಹೂವಿನ  ಬೆಲೆ ತೀವ್ರ ಕುಸಿತವಾಗಿದೆ. ಈ ಹಿನ್ನೆಲೆ ರೈತರೊಬ್ಬರು ತಾವು ಬೆಳೆದ ಹೂವನ್ನು ರಸ್ತೆಬದಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೆರ್ನಹಳ್ಳಿಯ ನಾರಾಯಣಪ್ಪ ಎಂಬ ರೈತ ದೇವರ ಪಾದದ ಬಳಿ ಇರಬೇಕಾದ ಹೂವನ್ನು ರಸ್ತೆಯಲ್ಲಿ ಚೆಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಕೆಜಿಗೆ 10 ರೂ.ನಂತೆ ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಇಲ್ಲದೆ ಹೂವಿನ ಬೆಳೆಗಾರರು ಕಂಗಾಲಾಗಿದ್ದಾರೆ.

ನಾರಾಯಣಪ್ಪ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಎಕರೆಗೆ 50 ಸಾವಿರದಂತೆ ಖರ್ಚು ಮಾಡಿ ಚೆಂಡು ಹೂವು ಬೆಳೆದಿದ್ದರು. ಆದರೆ ಚೆಂಡು ಹೂವು ಬೆಲೆ ಕುಸಿತ ಕಂಡ ಹಿನ್ನೆಲೆ ಕೋಲಾರ ಮುಖ್ಯರಸ್ತೆ ಬದಿಯಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!