ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಟ್ಟಲಾಗದ ಚಿನ್ನದಂತಿದ್ದ ಟೊಮ್ಯಾಟೊ ಬೆಲೆ ಇದೀಗ ಇದ್ದಕ್ಕಿದ್ದಂತೆಯೇ ಕುಸಿತ ಕಂಡಿದೆ.
ಟೊಮ್ಯಾಟೊ ಬೆಳೆಗೆ ದಿಢೀರನೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸಗಟು ಮಾರುಕಟ್ಟೆಗೆ ಹೋಗುವ ರಸ್ತೆಗಳಲ್ಲಿ ಟೊಮ್ಯಾಟೊ ಸುರಿದ ರೈತರು, ವರ್ತಕರ ಮೇಲೆ ಆಕ್ರೋಶಗೊಂಡ ವ್ಯಕ್ತಪಡಿಸಿದರು.
ಲಾಭದ ನಿರೀಕ್ಷೆಯಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಸಮೀಪದ ಇತರೆ ಗ್ರಾಮಗಳ ಅನೇಕ ರೈತರು ಬೆಳಗ್ಗೆಯೇ ಮಾರುಕಟ್ಟೆಗೆ ಟೊಮ್ಯಾಟೊ ತಂದಿದ್ದರು. ಆದರೆ, ಒಂದು ಕ್ರೇಟ್ ಟೊಮ್ಯಾಟೊ ಬೆಲೆ 20 ರಿಂದ 30 ರೂ.ವರೆಗೆ ಇದೆ ಎಂದು ವ್ಯಾಪಾರಿಗಳು ಹೇಳಿದಾಗ ಆಘಾತಕ್ಕೊಳಗಾದರು. ಇದರಿಂದ ಆಕ್ರೋಶಗೊಂಡ ರೈತರು, ಟೊಮ್ಯಾಟೊವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕ್ರೇಟ್ 25 ಕೆಜಿ ಟೊಮ್ಯಾಟೊವನ್ನು ಹೊಂದಿರುತ್ತದೆ. 25 ಕೆಜಿ ಟೊಮ್ಯಾಟೊ ಬೆಲೆ ಕೇವಲ 30 ರೂಪಾಯಿ ಎಂದು ಹೇಳಲಾಗಿದ್ದು, ಅನ್ನದಾತ ಆಕ್ರೋಶಗೊಂಡಿದ್ದಾನೆ.