ಮದ್ಯದ ದೊರೆಯ 400 ಕೋಟಿ ಮೌಲ್ಯದ ಫಾರ್ಮ್​ಹೌಸ್ ನೆಲಸಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅವರಿಗೆ ಸೇರಿದ ದೆಹಲಿಯಲ್ಲಿರುವ 400 ಕೋಟಿ ರೂ. ಮೌಲ್ಯದ ಅಕ್ರಮ ಫಾರ್ಮ್ ಹೌಸ್ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಸ್ಥಳೀಯ ಛತ್ರಪುರ ಪ್ರದೇಶದಲ್ಲಿ ಮದ್ಯದ ವ್ಯಾಪಾರಿ ಪಾಂಟಿ ಚಡ್ಡಾ ಅವರ ಕುಟುಂಬಕ್ಕೆ ಸೇರಿದ ತೋಟದ ಮನೆ ಇದೆ. ಇದರ ಮೌಲ್ಯ ಬರೋಬ್ಬರಿ 400 ಕೋಟಿಗೂ ಹೆಚ್ಚು. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಗರದಲ್ಲಿ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅಕ್ರಮ ಕಟ್ಟಡಗಳ ನಿರ್ಮಾಣ ತೆರವು ಕಾರ್ಯಾಚರಣೆ ಆರಂಭಿಸಿರುವ ಡಿಡಿಎ ಭಾರೀ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ ಮುಂದುವರಿದಿದ್ದು ಸುಮಾರು 10 ಎಕರೆಯಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಿದ್ದ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಫಾರ್ಮ್‌ಹೌಸ್ ಅನ್ನು ನೆಲಸಮಗೊಳಿಸಿದೆ.

ಸತತ ಎರಡು ದಿನಗಳ ಕಾರ್ಯಾಚರಣೆ ಮೊದಲ ದಿನ ಶುಕ್ರವಾರ ಐದು ಎಕರೆ ಹಾಗೂ ಶನಿವಾರ ಮುಖ್ಯ ಕಟ್ಟಡವನ್ನು ಕೆಡವಿ 10 ಎಕರೆ ಭೂಮಿಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಸಂಸ್ಥೆ ಅಥವಾ ಕುಟುಂಬಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!