ಫಾರೂಖ್ ಅಬ್ದುಲ್‍ಗೆ ಶಾಕ್ : ಜಮ್ಮುವಿನಲ್ಲಿ ಬಿಜೆಪಿ ಸೇರಿದ ನ್ಯಾಷನಲ್ ಕಾನರೆನ್ಸ್ ಮುಖಂಡರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮಹತ್ತರ ಬದಲಾವಣೆಯಾಗಿದ್ದು, ನ್ಯಾಷನಲ್ ಕಾನ್ಫರೆನ್ಸ್ ನ​ ಹಲವು ನಾಯಕರು ಬಿಜೆಪಿಗೆ ಸೇರುವ ಮೂಲಕ ಫಾರೂಖ್ ಅಬ್ದುಲ್‍ಗೆ ಶಾಕ್ ನೀಡಿದ್ದಾರೆ.

ಜಮ್ಮು ಪ್ರದೇಶದಲ್ಲಿ ಕತುವಾ ಜಿಲ್ಲಾಧ್ಯಕ್ಷ ಸೇರಿದಂತೆ ಹಲವು ನ್ಯಾಷನಲ್ ಕಾನ್ಫರೆನ್ಸ್​ನ ಪದಾಧಿಕಾರಿಗಳು, ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು. ಜಮ್ಮು ಮತ್ತು ಕಾಶ್ಮೀರ ಘಟಕದ ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ ಸ್ವಾಗತಿಸಿದರು.

ರವೀಂದ್ರ ರೈನಾ ಮಾತನಾಡಿ, ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ನಿರ್ಮಾಣ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಮತ್ತು ಸಾಧನೆಗಳು ಐತಿಹಾಸಿಕವಾಗಿವೆ. ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವದಲ್ಲಿ ರಾಷ್ಟ್ರದ ಏಕತೆ ಮತ್ತು ಪ್ರಗತಿಗೆ ಕಾರಣವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!