ಹೊಸದಿಂಗತ ಡಿಜಿಟಲ್ ಡೆಸ್ಕ್:
ಬಿಗ್ ಬಾರ್ಡರ್ ಹೊಂದಿರುವ ರೇಷ್ಮೆಯ ಸಾಂಪ್ರದಾಯಿಕ ಶೈಲಿಯ ಲಂಗ-ದಾವಣಿಗಳು ಈ ಬಾರಿ ಸಂಕ್ರಾಂತಿಯ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ.
ಧರಿಸಿದಾಗ ನೋಡಲು ಪಕ್ಕಾ ಸೌತ್ ಇಂಡಿಯನ್ ಲುಕ್ ನೀಡುವ ಈ ಟ್ರೆಡಿಷನಲ್ ರೇಷ್ಮೆಯ ಫ್ಯಾಬ್ರಿಕ್‌ನಿಂದ ಸಿದ್ಧಗೊಂಡಿರುವ ಈ ಲಂಗ-ದಾವಣಿಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿವೆ.
ಶುದ್ಧ ರೇಷ್ಮೆ ಫ್ಯಾಬ್ರಿಕ್‌ನ ಬಿಗ್ ಬಾರ್ಡರ್ ಲಂಗ-ದಾವಣಿಗಳಲ್ಲೂ ಇದೀಗ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಜರತಾರಿ ಸೀರೆಯಂತೆ ಕಾಣುವ ಕೆಲವು ಲಂಗದಲ್ಲಿ ಟ್ರೆಡಿಷನಲ್ ಪ್ರಿಂಟ್ಸ್ ಇರುವಂತಹ ಬಿಗ್ ಬಾರ್ಡರ್‌ಗಳು, ಟೆಂಪಲ್ ಡಿಸೈನ್ ಇರುವ ಬಿಗ್ ಬಾರ್ಡರ್ಸ್, ಜೆಮೆಟ್ರಿಕಲ್ ಡಿಸೈನ್ಸ್ ಬಾರ್ಡರ್‌ಗಳು ಸೇರಿದಂತೆ ನಾನಾ ಬಗೆಯವು ಈ ಫೆಸ್ಟಿವ್ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ.
ಇವನ್ನು ಧರಿಸಿದಾಗ ಇಡೀ ಲುಕ್ ಟ್ರೆಡಿಷನಲ್ ಇಮೇಜ್ ಪಡೆಯುತ್ತದೆ. ಪಕ್ಕಾ ಸೌತ್ ಇಂಡಿಯನ್ ವುಮೆನ್ ಲುಕ್ ನೀಡುತ್ತದೆ.