ಲಕ್ಷದ್ವೀಪಕ್ಕೆ ಇದೇ ಮೊದಲ ಬಾರಿಗೆ ಸಬ್​ ಮರೀನ್ ಆಪ್ಟಿಕ್ ಫೈಬರ್ ಕೇಬಲ್ ಅಳವಡಿಕೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಹತ್ತು ದಿನಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅವರು ಫೋಟೋ ಶೂಟ್ ಕೂಡ ಮಾಡಿದ್ದರು ಮತ್ತು ಜಲ ಚಟುವಟಿಕೆಗಳನ್ನು ಆರಂಭಿಸಿದ್ದರು. ಅದರಲ್ಲಿ ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ಕೆಲವು ಯೋಜನೆಗಳನ್ನು ಆರಂಭಿಸಿದ್ದಾರೆ.

ಅವರು ಲಕ್ಷದ್ವೀಪದ ವಿವಿಧ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಯೋಜನೆಯನ್ನೂ ಆರಂಭಿಸಿದರು. ಇದರಿಂದ ಲಕ್ಷದ್ವೀಪದ ಐಲ್ಯಾಂಡ್ಸ್ ಸಬ್​ಮರೀನ್ ಆಪ್ಟಿಕಲ್ ಫೈಬರ್ ಕನೆಕ್ಷನ್ ಪ್ರಾಜೆಕ್ಟ್​ಗೆ ನರೇಂದ್ರ ಮೋದಿ ಜನವರಿ 3ರಂದು ಚಾಲನೆ ನೀಡಿದರು.

ಲಕ್ಷದ್ವೀಪಕ್ಕೆ ಇದೇ ಮೊದಲ ಬಾರಿಗೆ ಸಬ್​ಮರೀನ್ ಆಪ್ಟಿಕ್ ಫೈಬರ್ ಕೇಬಲ್ ಅಳವಡಿಸಲಾಗುತ್ತಿದೆ. ಇದರಿಂದ ಲಕ್ಷದ್ವೀಪದ ವಿವಿಧ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ವೇಗ ಹೆಚ್ಚುತ್ತದೆ. ಸದ್ಯಕ್ಕೆ ಸೆಟಿಲೈಟ್ ಮೂಲಕ ಮಾತ್ರ ಲಕ್ಷದ್ವೀಪದಲ್ಲಿ ಇಂಟರ್ನೆಟ್ ಸಂಪರ್ಕ ಇದೆ.

ಇದರ ಬ್ಯಾಂಡ್​ವಿಡ್ತ್ ಬಹಳ ಸೀಮಿತವಾದುದು. ಫೈಬರ್ ಕೇಬಲ್ ಮೂಲಕ ಸಿಗುವ ಇಂಟರ್ನೆಟ್ ಬಹಳ ವಿಸ್ತೃತವಾಗಿದೆ. ಇದರಿಂದ ಲಕ್ಷದ್ವೀಪದಲ್ಲಿ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್​ಗೆ ಭರ್ಜರಿ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!