March 7, 2026
Saturday, March 7, 2026
spot_img

Fashion | ಸೀರೆ ಉಡ್ತೀರಾ ಸರಿ! ಆದ್ರೆ ಅದಕ್ಕೆ ಫಾಲ್ ಹಾಕ್ತಾರಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ

ಸೀರೆ ಅಂದ್ರೆ ಕೇವಲ ಬಟ್ಟೆ ಅಲ್ಲ, ಅದು ನಮ್ಮ ಸಂಸ್ಕೃತಿ, ಆತ್ಮವಿಶ್ವಾಸದ ಪ್ರತೀಕ. ಹೊಸ ಸೀರೆ ಖರೀದಿಸಿದಾಗ ಮೊಸಲು ಮಾಡುವ ಕೆಲಸ ಏನು? ಬಹುತೇಕ ಜನರು “ಫಾಲ್ ಹಾಕಿಸ್ಬೇಕು” ಅಂತಲೇ ಹೇಳ್ತಾರೆ. ಆದರೆ ಈ ಫಾಲ್ ಅನ್ನೋದು ಏಕೆ ಅಷ್ಟು ಮುಖ್ಯ? ಕೇವಲ ಫ್ಯಾಷನ್‌ಗೋಸ್ಕರವೇ ಅಥವಾ ಅದರ ಹಿಂದೆ ಉಪಯೋಗವೂ ಇದೆಯಾ? ಇಲ್ಲಿದೆ ಉತ್ತರ.

ಫಾಲ್ ಹಾಕಿ ಸೀರೆ ಉಟ್ಟಾಗ ಅದರ ಕೆಳಭಾಗ ನೇರವಾಗಿ ನಿಲ್ಲುತ್ತದೆ. ಸೀರೆ ತಿರುಗಿ ತಿರುಗಿ ಹೋಗೋದಿಲ್ಲ, ನೆಲಕ್ಕೆ ಸರಿ ಸರಿಯಾಗಿ ತಾಕುತ್ತೆ. ಇದರಿಂದ ಒಟ್ಟಾರೆ ಲುಕ್ ಕ್ಲೀನ್ ಆಗಿ ಕಾಣಿಸುತ್ತದೆ.

ಲೈಟ್ ವೆಟ್ ಸೀರೆಗಳು ನಡೆಯುವಾಗ ಹಾರೋದು ಸಾಮಾನ್ಯ. ಫಾಲ್ ಹಾಕಿದ್ರೆ ಸೀರೆಗೆ ಸ್ವಲ್ಪ ತೂಕ ಬರುತ್ತೆ. ಇದರಿಂದ ಪ್ಲೀಟ್ಸ್ ಚೆನ್ನಾಗಿ ಸೆಟ್ ಆಗುತ್ತವೆ ಮತ್ತು ಉಟ್ಟಾಗ ಕಂಫರ್ಟ್ ಆಗಿರುತ್ತೆ.

ಇದನ್ನೂ ಓದಿ:

ಫಾಲ್ ಇಲ್ಲದ ಸೀರೆ ಕಾಲಿಗೆ ಸುತ್ತಿಕೊಳ್ಳೋದು, ಮೆಟ್ಟಿಲೇರೋವಾಗ ತೊಂದರೆ ಆಗೋದು ಸಾಮಾನ್ಯ. ಫಾಲ್ ಇದ್ದರೆ ಈ ಸಮಸ್ಯೆ ಕಡಿಮೆಯಾಗುತ್ತದೆ.

ಹೆವಿ ಸೀರೆ ಆಗಿರಲಿ, ಕಾಟನ್ ಆಗಿರಲಿ ಫಾಲ್ ಹಾಕಿದ್ರೆ ಸೀರೆ ಹೆಚ್ಚು ಎಲಿಗಂಟ್ ಆಗಿ ಕಾಣುತ್ತೆ. ಅದಕ್ಕೇ ಡಿಸೈನರ್‌ಗಳು ಫಾಲ್‌ನ್ನು ಮಿಸ್ ಮಾಡಲ್ಲ ನೋಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !