ಸಂಕ್ರಾಂತಿ ಹಬ್ಬಕ್ಕೆ ಫ್ಯಾಷನ್‌ ಲೋಕ ಸಜ್ಜು: ಮಾರುಕಟ್ಟೆಗೆ ಲಗ್ಗೆ ಇಟ್ಟ ಎಥ್ನಿಕ್‌ ಔಟ್‌ಫಿಟ್ಸ್

ಹೊಸದಿಂಗತ ಡಿಜಿಟಲ್ ಡೆಸ್ಕ್;

ಈ ವರ್ಷದ ಮೊದಲ ಸಡಗರ-ಸಂಭ್ರಮದ ಹಬ್ಬ ಸಂಕ್ರಾಂತಿಗೆ ಈಗಾಗಲೇ ಫ್ಯಾಷನ್‌ ಲೋಕ ಸಜ್ಜಾಗಿದ್ದು, ಎಲ್ಲಾ ವಯಸ್ಸಿನ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಫ್ಯಾಷನ್‌ನಲ್ಲಿ ಊಹೆಗೂ ಮೀರಿದ ಎಥ್ನಿಕ್‌ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಪ್ರತಿಬಾರಿಯೂ ಸಂಕ್ರಾಂತಿಗೆ ನಮ್ಮ ಸಂಪ್ರದಾಯಕ್ಕೆ ಸಾಥ್‌ ನೀಡುವ ಟ್ರೆಡಿಷನಲ್‌ ಔಟ್ಫಿಟ್‌ಗಳು ಆಗಮಿಸಿವೆ. ಒಂದಿಷ್ಟು ವರ್ಷಗಳು ಕೇವಲ ತೀರಾ ಟ್ರೆಡಿಷನಲ್‌ ಡ್ರೆಸ್‌ಗಳು ಮಾತ್ರ ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಇತ್ತೀಚೆಗೆ ಎಲ್ಲಾ ವಯಸ್ಸಿನ ಮಹಿಳೆಯರು, ಪುರುಷರು ಹಾಗೂ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಟ್ರೆಡಿಷನಲ್‌ ಔಟ್‌ಫಿಟ್‌ಗಳನ್ನು ಹಾಗೂ ಎಥ್ನಿಕ್‌ ಡ್ರೆಸ್‌ಗಳನ್ನು ಡಿಸೈನ್ ಮಾಡಲಾಗುತ್ತಿದೆ.

ಅದರಲ್ಲೂ ಇತರೇ ಕಾರ್ಯಕ್ರಮ ಹಾಗೂ ಸಮಾರಂಭಗಳಲ್ಲೂ ಧರಿಸಬಹುದಾದ ಡಿಸೈನ್‌ನಲ್ಲಿ ಸಿದ್ಧಪಡಿಸಲಾಗುತ್ತಿರುವುದು ಮಾರಾಟದಲ್ಲೂ ಏರಿಕೆ ಕಂಡಿದೆ ಎನ್ನುತ್ತಾರೆ ಅಂಗಡಿ ಮಾಲೀಕರು. ಅವರ ಪ್ರಕಾರ, ಒಂದೇ ಬಗೆಯ ಎಥ್ನಿಕ್‌ ಡ್ರೆಸ್‌ಗಳನ್ನು ಧರಿಸುವ ಬದಲು ಬಗೆಬಗೆಯ ವೆರೈಟಿ ಡಿಸೈನ್‌ನ ಉಡುಪುಗಳನ್ನು ಧರಿಸಲು ಜನರು ಇಷ್ಟಪಡತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿಬಾರಿಯಂತೆ ಈ ಬಾರಿಯೂ ಕೂಡ ನಾನಾ ಬಗೆಯ ಟ್ರೆಡಿಷನಲ್‌ ಲುಕ್‌ ನೀಡುವ ಮಿಕ್ಸ್‌ ಮ್ಯಾಚ್‌ ಡಿಸೈನ್‌ನ ಇಂಡಿಯನ್‌ ಉಡುಪುಗಳು, ಇಂಡೋ-ವೆಸ್ಟರ್ನ್ ಶೈಲಿಯ ಔಟ್‌ಫಿಟ್‌ಗಳು ಬಂದಿವೆ. ನಾರ್ತ್ ಇಂಡಿಯನ್‌ ಸ್ಟೈಲ್‌ ಲಂಗ-ದಾವಣಿ, ಉದ್ದ ಲಂಗ, ಲಾಂಗ್‌ ಸ್ಕರ್ಟ್, ಬಾರ್ಡರ್‌ ಗೌನ್‌, ಬಾರ್ಡರ್‌ ಫ್ರಾಕ್‌, ರೇಷ್ಮೆಯ ಜಂಪ್‌ಸೂಟ್‌, ರೇಷ್ಮೆಯ ಡಿಸೈನರ್‌ ಲೆಹೆಂಗಾ ಹುಡುಗಿಯರಿಗೆ, ಮಕ್ಕಳಿಗೆ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಂದಿವೆ ಎನ್ನಲಾಗಿದೆ.

ಇನ್ನು ಯುವಕರಿಗೆ ಟ್ರೆಡಿಷನಲ್‌ ಜುಬ್ಬಾ-ಪೈಜಾಮ, ಪಂಚೆ-ಶಲ್ಯ ಎಂದಿನಂತೆ ಮತ್ತೊಮ್ಮೆ ಹೊಸ ರೂಪದಲ್ಲಿ ಲಗ್ಗೆ ಇಟ್ಟಿವೆ. ಇನ್ನು ಎಥ್ನಿಕ್‌ ಲುಕ್‌ ನೀಡುವ ಸಿಂಗಲ್‌ ದೇಸಿ ಶಾರ್ಟ್ ಜುಬ್ಬಾಗಳು ಬಂದಿವೆ. ಹಿರಿಯರಿಗೆ ಅವರ ವಯಸ್ಸಿಗೆ ಅನುಗುಣವಾಗಿ ಲೈಟ್‌ವೈಟ್‌ ರೇಷ್ಮೆಯ ಮೋದಿ ಕೋಟ್‌, ವೇಸ್ಕೋಟ್‌ ಹಾಗೂ ಜುಬ್ಬಾ-ಪೈಜಾಮ ಮಾರುಕಟ್ಟೆಗೆ ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!