September 16, 2026
Wednesday, September 16, 2026
spot_img

Fat Loss Journey | ತೂಕ ಇಳಿಸೋಕೆ ಮೊದಲು ದೇಹ ಅಲ್ಲ, ಮನಸ್ಸು ರೆಡಿ ಮಾಡ್ಕೊಳ್ಳಿ

ತೂಕ ಇಳಿಸಿಕೊಳ್ಳಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆದರೆ ಅದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡೋದು ಅಷ್ಟು ಸುಲಭವಲ್ಲ. ಫಿಟ್ನೆಸ್ ಜರ್ನಿಯಲ್ಲಿ ದೇಹಕ್ಕಿಂತ ಮೊದಲು ಮನಸ್ಸೇ ಸಿದ್ಧವಾಗಬೇಕು. ಯಾಕಂದ್ರೆ ವೆಯಿಟ್ ಲಾಸ್ ಅಂದ್ರೆ ಒಂದು ದಿನದ ಕೆಲಸವಲ್ಲ, ಅದು ಒಂದು ಪ್ರಯಾಣ.

ಫಾಸ್ಟ್ ರಿಸಲ್ಟ್ ನಿರೀಕ್ಷೆ ಬೇಡ:
ಬಹಳಷ್ಟು ಜನ ಒಂದು ವಾರ ಡಯಟ್ ಮಾಡಿ, ಎರಡು ದಿನ ವರ್ಕೌಟ್ ಮಾಡಿ ತೂಕ ಕಡಿಮೆ ಆಗಿಲ್ಲ ಅಂದ್ರೆ ನಿರಾಶೆಗೊಳ್ತಾರೆ. ಆದರೆ ಫ್ಯಾಟ್ ಲಾಸ್‌ಗೆ ಸಮಯ ಬೇಕು. ದೇಹ ನಿಧಾನವಾಗಿ ಬದಲಾಗುತ್ತದೆ.

ಪರಿಪೂರ್ಣತೆಗಿಂತ ನಿರಂತರತೆ ಮುಖ್ಯ:
ಒಂದು ದಿನ ಡಯಟ್ ಮಿಸ್ ಆಯ್ತು, ಒಂದು ದಿನ ಜಿಮ್ ಹೋಗ್ಲಿಲ್ಲ ಅಂದ್ರೆ ಜರ್ನಿ ಮುಗಿಯೋದಿಲ್ಲ. ಮತ್ತೆ ಮುಂದಿನ ದಿನ ಟ್ರ್ಯಾಕ್‌ಗೆ ಬಂದ್ರೆ ಸಾಕು. ಕಾನ್ಸಿಸ್ಟೆನ್ಸಿಯೇ ನಿಜವಾದ ಸೀಕ್ರೆಟ್.

ಇದನ್ನೂ ಓದಿ:

ಹೋಲಿಕೆ ಮಾಡ್ಕೊಳ್ಬೇಡಿ:
ಇತರರ ಟ್ರಾನ್ಸ್‌ಫಾರ್ಮೇಶನ್ ನೋಡಿ ನಿಮ್ಮ ಪ್ರಯಾಣವನ್ನು ಅಳೆಯಬೇಡಿ. ಪ್ರತಿಯೊಬ್ಬರ ದೇಹ, ಮೆಟಾಬಾಲಿಸಂ ಮತ್ತು ಸಮಯ ಬೇರೆ ಬೇರೆ.

ಸಣ್ಣ ಬದಲಾವಣೆಗೂ ಖುಷಿಪಡಿ:
ತೂಕದ ಸಂಖ್ಯೆಗೆ ಮಾತ್ರ ಗಮನ ಕೊಡಬೇಡಿ. ಎನರ್ಜಿ ಹೆಚ್ಚಾಗೋದು, ಬಟ್ಟೆ ಲೂಸ್ ಆಗೋದು, ಆತ್ಮವಿಶ್ವಾಸ ಹೆಚ್ಚಾಗೋದು ಇವು ಕೂಡ ದೊಡ್ಡ ಗೆಲುವುಗಳು.

ಫ್ಯಾಟ್ ಲಾಸ್ ಶುರುವಾಗೋದು ದೇಹದಲ್ಲಿ ಅಲ್ಲ… ಮನಸ್ಸಿನಲ್ಲಿ. ಮನಸ್ಸು ಗಟ್ಟಿಯಾಗಿದ್ರೆ ಫಲಿತಾಂಶ ಖಂಡಿತ ಬರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !