ಹೊಸದಿಗಂತ ಮಡಿಕೇರಿ:
ಬೈಕ್ ಮತ್ತು ಕಂಟೈನರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವಿಗೀಡಾದ ಘಟನೆ ಕೊಯನಾಡುವಿನಲ್ಲಿ ಸಂಭವಿಸಿದೆ.
ಮೃತರನ್ನು ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ನಿವಾಸಿ ಎಂ.ಚಿದಾನಂದ ಆಚಾರ್ಯ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಹಿಂಬದಿ ಸವಾರ ಮಹಿಳೆಯನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ಸಾಗಿಸಲಾಗಿದೆ.
ಸುಳ್ಯದಿಂದ ಬರುತ್ತಿದ್ದ ಕಂಟೈನರ್ ಮತ್ತು ಮಡಿಕೇರಿಯಿಂದ ಸಂಪಾಜೆಯತ್ತ ತೆರಳುತ್ತಿದ್ದ ಬೈಕ್ ಮಧ್ಯೆ ಕೊಯನಾಡುವಿನ ಚಡಾವು ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಪಾಜೆ ಉಪ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.