ಹೊಸದಿಗಂತ ವರದಿ ಧಾರವಾಡ:
ತರಕಾರಿ ಮಾರಲು ಬಂದಿದ್ದ ರೈತನ ಮೇಲೆ ಕಾಯಿಪಲ್ಲೆ ವ್ಯಾಪಾರಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧಾರವಾಡದ ಹೊಸ ಎಪಿಎಂಸಿಯಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಲೋಕೂರ ಗ್ರಾಮದ ಈರಪ್ಪ ರುದ್ರಪ್ಪ ಉಡಿಕೇರಿ ಹಲ್ಲೆಗೆ ಒಳಗಾದ ರೈತ. ಗಾಯಗೊಂಡ ರೈತರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಗಡಿ ಮುಂದೆ ವಾಹನ ನಿಲ್ಲಿಸಿ ತರಕಾರಿ ಇಳಿಸುತ್ತಿದ್ದ ವಿಷಯದಲ್ಲಿ ಜಗಳ ತೆಗೆದ ಐದು ಜನ ಕಾಯಿಪಲ್ಲೆ ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ ಎಂದು ರೈತ ಆರೋಪ ಮಾಡಿದ್ದಾರೆ.