ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಎಂಕೆ ಮುಖಂಡ ಎಂಕೆ ಅಳಗಿರಿ ಆಪ್ತ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ನಟೋರಿಯಸ್ ರೌಡಿಯಾಗಿರೊ ವಿಕೆ ಗುರುಸ್ವಾಮಿ ಮೂರ್ತಿ ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್‌ನಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ತಮಿಳುನಾಡಿನಿಂದ ಕಾರಿನಲ್ಲಿ ಬಂದ ಐವರು ಹೊಟೇಲ್ಗೆ ನುಗ್ಗಿ ಗುರುಸ್ವಾಮಿ ಮೇಲೆ ಮಚ್ಚು, ಲಾಂಗ್‌ಗಳಿಂದ ಮನಬಂದಂತೆ ಹಲ್ಲೆಗೈದು ಪರಾರಿಯಾಗಿದ್ದಾರೆ.
ಲಿಟಿಗೇಷನ್ ಇರೋ ಸೈಟ್ ವಿಚಾರವಾಗಿ ಬೆಂಗಳೂರಿಗೆ ಮಾತುಕತೆಗೆ ಬಂದಿದ್ದರು. ನಿನ್ನೆ ಫ್ಲೈಟ್‌ನಲ್ಲಿ ಬಂದು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ ಗುರುಸ್ವಾಮಿ, ಇವತ್ತು ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‌ಗೆ ಹೋಗಿದ್ದರು.
ಸುಮಾರು ಐದು ಮಂದಿ ಗುಂಪಿನಿಂದ ಲಾಂಗ್‌ನಿಂದ ಅಟ್ಯಾಕ್ ಮಾಡಿದ್ದು, ಗುರುಸ್ವಾಮಿ ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಹಲ್ಲೆಗೊಳಗಾದ ಗುರುಸ್ವಾಮಿ ಸ್ಥಿತಿ ಸದ್ಯ ಗಂಭೀರವಾಗಿದೆ. ಗುರುಸ್ವಾಮಿ 20 ನೇ ವರ್ಷದಲ್ಲೇ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದನು.