ಹೊಸದಿಗಂತ ಮಂಡ್ಯ :
ಅಪರಿಚಿತ ದುಷ್ಕರ್ಮಿಗಳು ಯೂಟೂಬ್ ಚಾನೆಲ್‌ನ ವರದಿಗಾರನ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ಇಲ್ಲಿನ ನೆಹರುನಗರ ಬಡಾವಣೆಯಲ್ಲಿ ನಡೆದಿದೆ.
ಒನ್ ಇಂಡಿಯಾ ಯೂಟೂಬ್ ಚಾನೆಲ್‌ನ ಮಾಲೀಕ ಜೈಕುಮಾರ್ ಅಲಿಯಾಸ್ ನಾರಾಯಣಮೂರ್ತಿ (41) ಎಂಬಾತನೇ ಹಲ್ಲೆಗೊಳಗಾದವರಾಗಿದ್ದಾರೆ.
ಶನಿವಾರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಮನೆಗೆ ಬಂದು ತನ್ನ ಬೈಕನ್ನು ಗೇಟ್ ಒಳಗೆ ನಿಲ್ಲಿಸಿ, ಗೇಟ್ ಹಾಕಲು ಮುಂದೆ ಬಂದ ವೇಳೆ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಜೈಕುಮಾರ್ ತಲೆ ಮತ್ತು ಕೈಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಚೀರಿಕೊಂಡ ಕಾರಣ ಅಕ್ಕ ಪಕ್ಕದ ನಿವಾಸಿಗಳು ಹಾಗೂ ಮನೆಯಲ್ಲೇ ಇದ್ದ ಆತನ ಪತ್ನಿ ಹೊರಗೆ ಬಂದು ಕೂಗಿಕೊಂಡಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.