ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮನೆಯ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿದ ತಂದೆ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಮೊರಾದಾಬಾದ್‌ನಲ್ಲಿ ಮನೆಯ ಮೇಲೆ ಪಾಕ್ ಧ್ವಜ ಹಾರಾಡಿದ್ದು, ಕೋಲಾಹಲ ಉಂಟಾಗಿತ್ತು. ಜನರೇ ಪೊಲೀಸರಿಗೆ ಮಾಹಿತಿ ನೀಡಿದ್ದರು, ಇದಾದ ನಂತರ ಪಾಕ್ ಧ್ವಜ ತೆಗೆದುಹಾಕಲಾಗಿತ್ತು.
ಪೊಲೀಸರು ರಯೀಸ್ ಹಾಗೂ ಅವರ ಪುತ್ರ ಸಲ್ಮಾನ್‌ರನ್ನು ಬಂಧಿಸಿದ್ದು, ಧ್ವಜ ಹಾರಿಸಿದ್ಯಾಕೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ರಯೀಸ್ ಬಟ್ಟೆ ಅಂಗಡಿ ಇಟ್ಟಿದ್ದು, ತಾನೇ ಪಾಕ್ ಧ್ವಜವನ್ನು ತಯಾರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಧ್ವಜದ ಫೋಟೊ, ವಿಡಿಯೋ ವೈರಲ್ ಆಗಿತ್ತು.