ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟ OYO ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಯೊ ಸಂಸ್ಥಾಪಕ ರಿತೇಶ್​ ಅಗರ್ವಾಲ್​ ಅವರಿಗೆ ಪಿತೃ ವಿಯೋಗವಾಗಿದೆ.
ಶುಕ್ರವಾರ (ಮಾ.10) ಗುರುಗ್ರಾಮದಲ್ಲಿರುವ ಬಹುಮಹಡಿ ಕಟ್ಟಡದ 20 ಮಹಡಿಯಿಂದ ಕೆಳಗೆ ರಿತೇಶ್​ ಅಗರ್ವಾಲ್​ ತಂದೆ ರಮೇಶ್​ ಅಗರ್ವಾಲ್​ ಅವರು ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ.

ಈ ವಾರದ ಆರಂಭದಲ್ಲಿ 29 ವರ್ಷದ ರಿತೇಶ್​ ಅಗರ್ವಾಲ್​ ಅವರು ಫಾರ್ಮೇಶನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಗೀತಾನ್ಶಾ ಸೂದ್​ ಅವರನ್ನು ವರಿಸಿದರು.
ಇದೀಗ ಮದುವೆಯಾದ ಕೆಲವೇ ದಿನಗಳಲ್ಲಿ ರಿತೇಶ್​ ಅವರಿಗೆ ಪಿತೃ ವಿಯೋಗ ಆಗಿದ್ದು, ಇಂತಹ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ರಿತೇಶ್​ ಮನವಿ ಮಾಡಿಕೊಂಡಿದ್ದಾರೆ.

ನಮ್ಮ ಕುಟುಂಬದ ಮಾರ್ಗದರ್ಶಕರಾಗಿದ್ದ ಮತ್ತು ಶಕ್ತಿಯಾಗಿದ್ದ ನಮ್ಮ ತಂದೆ ರಮೇಶ್ ಅಗರ್ವಾಲ್ ಮಾರ್ಚ್ 10 ರಂದು ನಿಧನರಾದರು ಎಂದು ಭಾರವಾದ ಹೃದಯದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ತಂದೆ ಪೂರ್ಣ ಜೀವನವನ್ನು ನಡೆಸಿದರು ಮತ್ತು ನನಗೆ ಹಾಗೂ ನಮ್ಮಲ್ಲಿ ಅನೇಕರಿಗೆ ಪ್ರತಿದಿನ ಸ್ಫೂರ್ತಿ ತುಂಬಿದರು. ಅವರ ನಿಧನದಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನನ್ನ ತಂದೆಯ ಸಹಾನುಭೂತಿ ಕಷ್ಟದ ಸಮಯದಲ್ಲಿ ನಮ್ಮನ್ನು ಮುನ್ನಡೆಸಿತು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಅನುರಣಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!