ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ತಂದೆ ನಿಧನದ ಹಿನ್ನೆಲೆ 57ನೇ ಸಿಸಿಹೆಚ್ ಕೋರ್ಟ್ 20 ದಿನ ಮಧ್ಯಂತರ ಜಾಮೀನು ನೀಡಿ, ಆದೇಶ ಹೊರಡಿಸಿದೆ.
ತಂದೆ ನಿಧನದ ಹಿನ್ನೆಲೆ ಆರೋಪಿ ಪ್ರದೋಷ್ ಅಂತ್ಯ ಸಂಸ್ಕಾರ ಹಾಗೂ ಇತರೆ ಕಾರ್ಯಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪ್ರದೋಷ್ ಪರ ಹಿರಿಯ ವಕೀಲ ದಿವಾಕರ್ ವಾದ ಮಂಡಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತ್ಯ ಸಂಸ್ಕಾರ ಹಾಗೂ ಇತರ ಕಾರ್ಯಗಳನ್ನು ಮುಗಿಸಲು 20 ದಿನ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ನ್ಯಾಯಾಧೀಶ ಐಪಿ ನಾಯಕ್ ಆದೇಶ ಹೊರಡಿಸಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ |ಆರೋಪಿ ಪ್ರದೋಷ್‌ಗೆ 20 ದಿನ ಮಧ್ಯಂತರ ಜಾಮೀನು
 
                                    
