ದನದ ಕೊಟ್ಟಿಗೆಯಲ್ಲಿ ಖೋಟಾನೋಟು ಪ್ರಿಂಟ್‌ ಮಾಡುತ್ತಿದ್ದ ತಂದೆ-ಮಗನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೈಸೂರು ಜಿಲ್ಲೆಯ ಮಾದಾಪುರ ಬಳಿ ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್‌ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಟಿ. ನರಸೀಪುರ ಪೊಲೀಸರು ದಾಳಿ ಮಾಡಿ ಕೃತ್ಯದಲ್ಲಿ ತೊಡಗಿದ್ದ ತಂದೆ ಮತ್ತು ಮಗನನ್ನು ಬಂಧಿಸಿರುವ ಘಟನೆ ಟಿ. ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿದ್ದ ನೋಟು ಪ್ರಿಂಟ್‌ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಿರಿಯೂರು ಗ್ರಾಮದ ನಾಗೇಶ್ (25) ಹಾಗೂ ಶಿವಪ್ರಸಾದ್ (48) ಬಂಧಿತ ಆರೋಪಿಗಳು. ಖಚಿತ ಮಾಹಿತಿಯ ಮೇರೆಗೆ ಟಿ. ನರಸೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್​ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಅರೋಪಿಗಳು ತಾವು ಮಲಗಲು ಹಾಸಿಕೊಂಡಿದ್ದ ಹಾಸಿಗೆ ಪಕ್ಕದಲ್ಲಿ ರಟ್ಟಿನ ಬಾಕ್ಸ್​ನಲ್ಲಿ ಎಪ್ಸನ್ ಕಲರ್ ಪ್ರಿಂಟರ್ ಕಂಡುಬಂದಿದೆ‌‌. ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದಾಗ ಈ ಕೃತ್ಯಕ್ಕೆ ಬಳಸುತ್ತಿದ್ದ‌‌ ಎಲ್ಲ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!