March 31, 2026
Tuesday, March 31, 2026
spot_img

ಮಗನ ಕೈಯಿಂದಲೇ ಮಸೀದಿ ಗೋಡೆ ಮೇಲೆ ʼಜೈ ಶ್ರೀರಾಮ್‌ ʼ ಬರೆಸಿದ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಗಲಕೋಟೆಯಲ್ಲಿ ಮುಸ್ಲಿಂ ತಂದೆಯೊಬ್ಬ ತನ್ನ ಮಗನ ಕೈಯಲ್ಲಿ ಮಸೀದಿ ಗೋಡೆ ಮೇಲೆ ಜೈ ಶ್ರೀರಾಮ್‌ ಎಂದು ಬರೆಸಿದ್ದಾರೆ. ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದ್ದು, ಇಡೀ ಊರು ಬೂದಿ ಮುಚ್ಚಿದ ಕೆಂಡದಂತಿದೆ.

ಬಾಗಲಕೋಟೆಯ ಸೆಕ್ಟರ್‌ 44ರ ಮಸೀದಿ ಕಾಂಪೌಂಡ್‌ ಮೇಲೆ ಈ ಬರಹ ಕಾಣಿಸಿದೆ. ಮಗನ ಕೈಯಲ್ಲಿ ಶ್ರೀರಾಮ್‌ ಎಂದು ಬರೆಸಿ ನಂತರ ಆಟೋದಲ್ಲಿ ತಂದೆ ಮಗ ತೆರಳಿದ್ದಾರೆ. ಕ್ಯಾಮರಾದಲ್ಲಿ ಈ ಘಟನೆ ಕ್ಯಾಪ್ಚರ್‌ ಆಗಿದೆ. ಇನ್ನು ಈ ಪ್ರಕರಣ ಸಂಬಂಧ ನವನಗರ ಠಾಣೆ ಪೊಲೀಸರು, ಯಮನೂರಿ ಹಾಗೂ ಆತನ ಮಗನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಜೈ ಶ್ರೀರಾಮ್‌ ಬರಹಕ್ಕೆ ನೀರು ಹಾಕಿ ತಿಕ್ಕಿ ಅಳಿಸಿದ್ದಾರೆ. 12 ವರ್ಷದ ಮಗುವಿನ ಕೈಯಿಂದ ಶ್ರೀರಾಮ್‌ ಎಂದು ಬರೆಸಿದ್ದು ಏಕೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !