ಸೋಮವಾರಪೇಟೆ ಬಸ್ಸ್ ನಿಲ್ದಾಣ ಬಳಿ ಬರೆ ಕುಸಿಯುವ ಭೀತಿ: ಅಪಾಯದ ಅಂಚಿನಲ್ಲಿರುವ ಅಂಗಡಿಗಳಿಗೆ ಬೀಗ!

ಹೊಸ ದಿಗಂತ ವರದಿ, ಸೋಮವಾರಪೇಟೆ:

ಅತಿಯಾದ ಮಳೆಯಿಂದ ಬರೆಕುಸಿಯುವ ಭೀತಿಯಿಂದ ಮುಂಜಾಗ್ರತೆಯಾಗಿ ಪಟ್ಟಣ ಬಸ್ಸ್ ನಿಲ್ದಾಣದ 5 ಅಂಗಡಿಗಳನ್ನು ತಹಸೀಲ್ದಾರ್ ಕೃಷ್ಣ ಮೂರ್ತಿ ಇಂದು ಖಾಲಿ ಮಾಡಿಸಿ ಬೀಗ ಜಡಿದಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ,ರಭಸದ ಗಾಳಿಯಿಂದ ಅಲ್ಲಲ್ಲಿ ಮರಗಳು,ಮನೆಗಳು ಧರೆಗುರುಳಿವೆ.ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಬಸಪ್ಪ ಪೆಟ್ರೋಲ್ ಬಂಕ್ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲು ಮಣ್ಣು ತೆಗೆದು ಹಲವು ಸಮಯಗಳಾಗಿದ್ದರೂ ಈ ವರೆಗೆ ಕಾಮಗಾರಿ ನಡೆಸದ ಹಿನ್ನಲೆಯಲ್ಲಿ ಭಾರಿ ಮಳೆಯಿಂದ ಬರೆಕುಸಿಯುವ ಭೀತಿ ಎದುರಾಗಿದೆ ಇದರ ಮೇಲ್ಭಾಗದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿರುವ ತರಕಾರಿ ಅಂಗಡಿ,ಪಟ್ಟಣ ಪಂಚಾಯ್ತಿ ಸದಸ್ಯ ಸಂಜೀವ ಅವರದ್ದು ಸೇರಿದಂತೆ 5 ಅಂಗಡಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಈಬಗ್ಗೆ ಗಮನ ಹರಿಸಿದ ತಾಲೂಕು ದಂಡಾಧಿಕಾರಿ ಕೃಷ್ಣಮೂರ್ತಿಯವರು ಸ್ಥಳಕ್ಕೆ ತೆರಳಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಎಚ್ಚರಿಕೆ ಹಾಗೂ ಮಾಹಿತಿ ನೀಡಿ ತಕ್ಷಣವೇ ಎಲ್ಲಾ ಅಂಗಡಿಗಳನ್ನು ತಕ್ಷಣವೇ ಖಾಲಿ ಮಾಡಿಸಿ ಬೀಗ ಜಡಿದಿದ್ದಾರೆ.

ಬರೇ ಕುಸಿತ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ವಿವತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಸೂಕ್ತ ಕ್ರಮ ಕೈಗೊಂಡು ಅಂಗಡಿಗಳನ್ನು ಖಾಲಿ ಮಾಡಿಸಿದ್ದೇವೆ ಹಾಗೂ ಬರೆಕುಸಿಯದಂತೆ ತಾತ್ಕಾಲಿಕವಾಗಿ ಟಾರ್ಪಲ್ ಹಾಕಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.ಈ ಸಂದರ್ಭ ವೃತ್ತ ನಿರೀಕ್ಷಕ ಮುದ್ದುಮಾದೇವ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!