ತಮ್ಮೂರಲ್ಲೇ ಸೇಫ್ಟಿ ಬಗ್ಗೆ ಭಯನಾ? ಪಿಎಸ್‌ಎಲ್‌ನ್ನು ಯುಎಇಗೆ ಸ್ಥಳಾಂತರಿಸಿದ ಪಾಕಿಸ್ತಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ-ಪಾಕಿಸ್ತಾನ ಯುದ್ಧ ಭೀತಿ ಬೆನ್ನಲ್ಲೇ ಪಾಕಿಸ್ತಾನ್‌ ಸೂಪರ್‌ ಲೀಗ್‌ನ್ನ ಯುನೈಟೆಡ್‌ ಅರಬ್‌ ಎಮಿರೈಟ್ಸ್‌ಗೆ ಸ್ಥಳಾಂತರಿಸಲಾಗಿದೆ. ತಮ್ಮೂರಿನಲ್ಲೇ ಸೇಫ್ಟಿ ಇಲ್ವಾ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಭಾರತದಿಂದ ಯಾವುದೇ ಕ್ಷಣದಲ್ಲಿ ದಾಳಿ ಆಗಬಹುದು ಎನ್ನುವ  ಭಯಕ್ಕೆ ವಿದೇಶಿ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿದೇಶಿ ಆಟಗಾರರು ಪಾಕ್‌ನಲ್ಲಿ ಆಡುವುದನ್ನು ಮುಂದುವರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದ್ದು, ಪಂದ್ಯಾವಳಿಯಲ್ಲಿ ಉಳಿದ ಎಂಟು ಪಂದ್ಯಗಳನ್ನು ರಾವಲ್ಪಿಂಡಿ, ಮುಲ್ತಾನ್ ಮತ್ತು ಲಾಹೋರ್ ಬದಲಿಗೆ ಯುಎಇಯಲ್ಲಿ ಆಯೋಜಿಸಲಾಗುವುದು ಎಂದಿದೆ.

ವಿದೇಶಿ ಆಟಗಾರರಲ್ಲಿ ಹೆಚ್ಚುತ್ತಿರುವ ಕಳವಳಗಳು ಮತ್ತು ಅವರ ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯವನ್ನು ಉಲ್ಲೇಖಿಸಿ ಪಿಸಿಬಿ ಶುಕ್ರವಾರದ ಆರಂಭದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪಿಎಸ್ಎಲ್ ಅನ್ನು ಸ್ಥಳಾಂತರಿಸುವ ಬಗ್ಗೆ ದೃಢಪಡಿಸಿದೆ. ಆಟಗಾರರು ಸುರಕ್ಷಿತವಾಗಿ ಅಲ್ಲಿಗೆ ತೆರಳಿದ ನಂತರ, ಪರಿಷ್ಕೃತ ದಿನಾಂಕಗಳು ಮತ್ತು ಸ್ಥಳ ಸೇರಿದಂತೆ ಅಂತಿಮ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!