ಹುಬ್ಬಳ್ಳಿ| ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಶುಲ್ಕ ರದ್ದುಗೊಳಿಸುವಂತೆ ಸಚಿವರಿಗೆ ಮನವಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಶುಲ್ಕ ವಿಧಿಸುತ್ತಿದ್ದು, ತಕ್ಷಣ ರದ್ದುಪಡಿಸಬೇಕು ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಗುರುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ನಗರದಿಂದ 10 ಕಿ.ಮೀ ದೂರವಿರುವ ವಿಮಾನ ನಿಲ್ದಾಣಕ್ಕೆ ಬೇರೆ ಕಡೆಯಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಆಟೋ ರಿಕ್ಷಾ ಚಾಲಕರು ಸೇವೆ ಒದಗಿಸಲು ಇತ್ತೀಚೆಗೆ ಪ್ರಾರಂಭಿಸಲಾಗಿದೆ.
ಆಟೋ ಚಾಲಕರ ನಿತ್ಯ ದುಡಿದರೆ ಮಾತ್ರ ಕುಟುಂಬ ನಡೆಸಲು ಸಾಧ್ಯವಾಗುತ್ತದೆ. ಆದರೆ ವಿಮಾನ ನಿಲ್ದಾಣದಲ್ಲಿ ಅತೀ ಹೆಚ್ಚು ಶುಲ್ಕ ವಿಧಿಸುವುದರಿಂದ ದುಡಿಯುವ ಹಣ ನೀಡಲಾಗುತ್ತಿದೆ. ಆದರಿಂದ ಬಡ ಆಟೋ ಚಾಲಕರ ಸಮಸ್ಯೆ ಬಗೆಹರಿಸಿ ಈಗ ಭರಿಸುತ್ತಿರುವ ಶುಲ್ಕ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ರಫೀಕ ಬಡೆಗರ, ಜೀವನ ಉತ್ಕೂರಿ, ಬಸವರಾಜ ಅವರಳ್ಳಿ, ಬಾಬಾಜಾನ ಬಳಗಾನೂರ, ಅಬ್ದುಲ್ ದುಬೈ, ಗಜಾನನ ಕಾಪೆ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!