ಈ ಬಾರಿ ಗಣೇಶ ಚತುರ್ಥಿಗೆ ಬಗೆಬಗೆಯ ಮೋದಕಗಳನ್ನು ಮಾಡಿ ಇನ್ನಷ್ಟು ಹಬ್ಬಕ್ಕೆ ಮೆರಗು ನೀಡಿ.
ಡ್ರೈ ಫ್ರೂಟ್ಸ್ ಮೋದಕ:
ಗೋಡಂಬಿ – 1/4 ಕಪ್
ಬಾದಾಮಿ – 1/4 ಕಪ್
ಪಿಸ್ತಾ – 1/4 ಕಪ್
ಒಣ ದ್ರಾಕ್ಷಿ – 1/4 ಕಪ್
ಕೊಬ್ಬರಿ ತುರಿ – 2-3 ಚಮಚ
ಖರ್ಜೂರ – 1/2 ಕಪ್
ತುಪ್ಪ – 3ರಿಂದ 4 ಚಮಚ
ಮಾಡುವ ವಿಧಾನ:
ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯನ್ನು ಬ್ಲೆಂಡರ್ ನಲ್ಲಿ ರುಬ್ಬುವ ಮೂಲಕ ಪ್ರಾರಂಭಿಸಿ.
ನಂತರ ಒಣ ದ್ರಾಕ್ಷಿ ಮತ್ತು ಖರ್ಜೂರದ ಪೇಸ್ಟ್ ಮಾಡಿಕೊಳ್ಳಿ.
ನಂತರ ಸ್ವಲ್ಪ ತುಪ್ಪ, ರುಬ್ಬಿದ ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ.
ನಂತರ ಖರ್ಜೂರ, ದ್ರಾಕ್ಷಿ ಪೇಸ್ಟ್ ಮತ್ತು ತೆಂಗಿನಕಾಯಿ ಸೇರಿಸಿ ಬೆರೆಸಿ.
ನಂತರ ಡ್ರೈ ಫ್ರೂಟ್ ಮಿಶ್ರಣವನ್ನು ಮೋದಕ ಅಚ್ಚಿನಲ್ಲಿ ಸೇರಿಸಿ ಒತ್ತಿದರೆ ಆರೋಗ್ಯಕರ ಡ್ರೈ ಫ್ರೂಟ್ ಮೋದಕ ರೆಡಿ.
ರೋಸ್ ರಸ್ಮಲೈ ಮೋದಕ:
ಪನ್ನಿರ್ – 200 ಗ್ರಾಂ
ಹಾಲಿನ ಪುಡಿ – 3/4 ಕಪ್
ತುಪ್ಪ – 1 ಚಮಚ
ಸಕ್ಕರೆ – 1/2 ಕಪ್
ಏಲಕ್ಕಿ ಪುಡಿ – ಸ್ವಲ್ಪ
ಪಿಸ್ತಾ – ಸ್ವಲ್ಪ
ಪಿಂಕ್ ಫುಡ್ ಕಲರ್ – ಅಗತ್ಯಕ್ಕೆ ತಕ್ಕಷ್ಟು
ರೋಸ್ (ಗುಲಾಬಿ) ದಳಗಳು
ಮಾಡುವ ವಿಧಾನ:
ಪನ್ನೀರನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ.
ನಂತರ ತುಪ್ಪ ಹಾಕಿ ಬಿಸಿಯಾದ ನಂತರ ಪುಡಿ ಮಾಡಿದ ಪನ್ನೀರ್ ಹಾಕಿ.
ನಂತರ ಸಕ್ಕರೆ, ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಏಲಕ್ಕಿ ಪುಡಿ, ಪಿಸ್ತಾ ಪುಡಿ ಮತ್ತು ಪಿಂಕ್ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ.
ಮೋದಕ ಅಚ್ಚಿನಲ್ಲಿ ಗುಲಾಬಿ ದಳಗಳನ್ನು ಹಾಕಿ, ಪಿಸ್ತಾ ಸೇರಿಸಿ, ಮಿಶ್ರಣವನ್ನು ತುಂಬಿಸಿ ಮತ್ತು ಒತ್ತಿರಿ.
ರುಚಿಕರವಾದ ರೋಸ್ ರಸ್ಮಲೈ ಮೋದಕ ಸವಿಯಲು ಸಿದ್ಧವಾಗಿದೆ.
ಅಂಜೂರದ ಮೋದಕ:
ಬಾದಾಮಿ – 1/4 ಕಪ್
ಗೋಡಂಬಿ – 1/4 ಕಪ್
ಪಿಸ್ತಾ – 2 ಚಮಚ
ಒಣ ದ್ರಾಕ್ಷಿ – 2 ಚಮಚ
ಅಂಜೂರ – 1/2 ಕಪ್
ಖರ್ಜೂರ – 1/2 ಕಪ್
ಪುಡಿ ಮಾಡಿದ ತೆಂಗಿನ ತುರಿ – 1/4 ಕಪ್
ಗಸೆಗಸೆ – 1/4 ಕಪ್
ಏಲಕ್ಕಿ ಪುಡಿ – 1/2 ಚಮಚ
ಮಾಡುವ ವಿಧಾನ:
ಬಾದಾಮಿ, ಗೋಡಂಬಿ ಮತ್ತು ಪಿಸ್ತಾವನ್ನು ಮಿಕ್ಸಿ ಗ್ಲಾಸ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಒಣದ್ರಾಕ್ಷಿ, ಅಂಜೂರ ಮತ್ತು ಖರ್ಜೂರ ಸೇರಿಸಿ ಪೇಸ್ಟ್ ಮಾಡಿ.
ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ತೆಂಗಿನ ತುರಿ, ಗಸಗಸೆ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ.
ಸಿದ್ಧಪಡಿಸಿದ ಮಿಶ್ರಣವನ್ನು ಅಚ್ಚಿನಲ್ಲಿ ಹಾಕಿ ಮತ್ತು ಒತ್ತಿರಿ. ಮೋದಕ ಸಿದ್ಧ.