ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರನ್ನು ನಾನೇ ಮೇವು ಹಾಕಿ ಸಾಕಿದ್ದೇನೆ, ಈಗ ಅವು ನನ್ನ ಮೇಲೆಯೇ ಕುಸ್ತಿ ಮಾಡ್ತಿದ್ದಾವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಹಾಲು ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಶಾಸಕನಾಗಿದ್ದೇನೆ. ನಾನು ಕೆಲಸ ಮಾಡಿದ್ದೀನಿ. ನನ್ನ ಮನೆ ಕೆಲಸ ಮಾಡಿಲ್ಲ. ಒಂದು ಕಾರು ತಗೊಳೋಕೆ ಆಗಿಲ್ಲ. ರೇವಣ್ಣ ಅವರನ್ನು ಮುಗಿಸುತ್ತೇವೆ ಎಂದಿದ್ದಾರೆ. ರೇವಣ್ಣ ಮತ್ತು ದೇವೇಗೌಡರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
1,500 ಸೊಸೈಟಿ ನಡೆಸುವುದು ಸುಲಭವಲ್ಲ. ಕೆಲವರಿಗೆ ಹದಿನೈದು ಇಪ್ಪತ್ತು ವರ್ಷಗಳ ಕಾಲ ನಾನೇ ಊಟ ಹಾಕಿದ್ದೆ. ಈಗ ಅವರು ನನ್ನ ವಿರುದ್ಧ ಹೋರಾಡುತ್ತಿದ್ದಾರೆ ಎಂದು ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.