March 17, 2026
Tuesday, March 17, 2026
spot_img

ಹುಬ್ಬಳ್ಳಿಯಲ್ಲಿ ಹಬ್ಬದ ವಾತಾವರಣ: ಮನೆಗಳ ಹಂಚಿಕೆ ಸಮಾರಂಭಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ವಸತಿ ಇಲಾಖೆ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳ ಹಂಚಿಕೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.

ಶನಿವಾರ ಇಲ್ಲಿಯ ಮಂಟೂರ ರಸ್ತೆಯಲ್ಲಿ ನಿರ್ಮಿಸಲಾದ ಮನೆಗಳಿರುವ ಪ್ರದೇಶಕ್ಕೆ ಭೇಟಿ ನೀಡಿ ಲೋಕಾರ್ಪಣೆ ಗೊಳಿಸಿದರು.‌ ಬಳಿಕ ನಿರ್ಮಿಸಿದ ಮನೆಗಳನ್ನು ಪರಿಶೀಲಿಸಿದರು. ರಾಜ್ಯದಲ್ಲಿ ಏಕಕಾಲದಲ್ಲಿ 42345 ಮನೆಗಳಿಗೆ ಚಾಲನೆ ನೀಡಿದರು.

ಹುಬ್ಬಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿಗಿತ್ತು. ಸಕಲ ಕಲಾ ತಂಡಗಳು ಭಾಗವಹಿಸಿದ್ದರು. ಸ್ವಸಹಾಯ ಗುಂಪುಗಳ ಮಹಿಳೆಯರು ಕುಂಬ ಹೊತ್ತು ಸಿಎಂ ಅವರನ್ನು ಸ್ವಾಗತಿಸಿದರು.

ವಸತಿ ಇಲಾಖೆ ಸಚಿವ ಜಮೀರ್ ಅಹಮ್ಮದ ಖಾನ್, ಸಚಿವ ಎಚ್.ಸಿ.‌ಮಹಾದೇವಪ್ಪ, ಸಚಿವ ಕೆ.ಎಚ್. ಮುನಿಯಪ್ಪ, ಸತೀಶ ಜಾರಕಿಹೊಳಿ, ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ, ಶಾಸಕ ಎನ್.ಎಚ್.‌ಕೋನರೆಡ್ಡಿ, ಎಫ್. ಎಚ್. ಜಕ್ಕಪ್ಪನವರ, ಸಲೀಂ‌ ಅಹ್ಮದ್, ಮಯೂರ ಜಯಕುಮಾರ, ಶ್ರೀನಿವಾಸ ಮಾನೆ, ಯಾಸೀರ್ ಖಾನ ಪಠಾಣ, ಅಜಂಪೀರ ಖಾದ್ರಿ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !