ಬೇಕಾಗುವ ಪದಾರ್ಥ:
ಕ್ಯಾರೆಟ್ : 500 ಗ್ರಾಂ
ಸಕ್ಕರೆ : 100 ಗ್ರಾಂ
ತುಪ್ಪ : 3 ಚಮಚ
ಏಲಕ್ಕಿ ಪುಡಿ : 1 ಚಮಚ
ಗೋಡಂಬಿ : 3-6
ಒಣ ದ್ರಾಕ್ಷಿ – 3-6
ತೆಂಗಿನ ತುರಿ :1 ಕಪ್
ಮಾಡುವ ವಿಧಾನ :
ಕ್ಯಾರೆಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಕ್ಯಾರೆಟ್ ಹಾಕಿ ಚೆನ್ನಾಗಿ ಕಲಸಿ ಸ್ವಲ್ಪ ಹುರಿಯಿರಿ. ತುರಿದ ಕ್ಯಾರೆಟ್‌ನ ಹಸಿ ವಾಸನೆ ಹೋಗ್ತಿದ್ದಂತೆ, ತುರಿದ ತೆಂಗಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಏಲಕ್ಕಿ ಪುಡಿ ಸೇರಿಸಿ. ತೆಂಗಿನ ತುರಿ ಹಸಿ ವಾಸನೆ ಹೋದ್ಮಲೆ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಸಿದ್ಧವಾದ ನಂತರ, ಪ್ಯಾನ್‌ಗೆ ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ ಉರಿಯಿರಿ ನಂತರ ಮಿಶ್ರಣಕ್ಕೆ ಸೇರಿಸಿ. ನಂತರ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ರೂಪಿಸಿ. ಸವಿಯಾದ ಕ್ಯಾರೆಟ್ ಲಡ್ಡು ತಿನ್ನಲು ಸಿದ್ದ.