ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ಅಭಿನಯದ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಠಿಯಾವಾಡಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಬಾಲಿವುಡ್ ಸೆಲೆಬ್ರಿಟಿಗಳು ಸಿನಿಮಾ ನೋಡಿ ಆಲಿಯಾ ನಟನೆಗೆ ಫಿದಾ ಆಗಿದ್ದಾರೆ. ಇದೀಗ ನಟ ವರುಣ್ ಧವನ್ ಗಂಗೂಬಾಯಿ ಸಿನಿಮಾ ನೋಡಿ ಆಲಿಯಾರನ್ನು ಮನಸಾರೆ ಹೊಗಳಿದ್ದಾರೆ.
ಸಿನಿಮಾ ನೋಡಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದೇನೆ. ನಿನ್ನ ನಟನೆ ನೋಡಿ ಮಂತ್ರಮುಗ್ಧನಾಗಿದ್ದೇನೆ. ಸುಂದರ ಸಿನಿಮಾ ಇದು, ಇದರಲ್ಲಿ ಕೆಲಸ ಮಾಡಿದ ಪ್ರತಿ ಟೆಕ್ನಿಶಿಯನ್ ಹಾರ್ಡ್‌ವರ್ಕ್ ಎದ್ದು ಕಾಣುತ್ತಿದೆ. ಎಲ್ಲರೂ ಹೊಗಳಿಕೆಗೆ ಅರ್ಹರು. ಇನ್ನು ಸಂಜಯ್ ಲೀಲಾ ಬನ್ಸಾಲಿ ಅವರ ಬಗ್ಗೆ ಹೇಳೋಕೆ ಮಾತೇ ಇಲ್ಲ. ಎಲ್ಲರೂ ಸಿನಿಮಾ ನೋಡಿ ಎಂದು ವರುಣ್ ಹೇಳಿದ್ದಾರೆ.