ಐಪಿಎಲ್‌ 2020: ಗುಜರಾತ್‌ ಪ್ರಂಚೈಸಿಗೆ ಬಿಗ್‌ ಶಾಕ್; ಟೂರ್ನಿಯಿಂದ ಹಿಂದೆ ಸರಿದ ಸ್ಟಾರ್ ಆಟಗಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮುಂಬೈ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಮಾರ್ಚ್ 26 ರಂದು ಚುಟುಕು ಕ್ರಿಕೆಟ್ ಮಹಾಸಮರ ಐಪಿಎಲ್ ಗೆ ಮುಂಬೈನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಈ ನಡುವೆ ಹೊಸ ಪ್ರಾಂಚೈಸಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರಂಭದಲ್ಲಿಯೇ ಬಿಗ್ ಶಾಕ್ ಎದುರಾಗಿದೆ. ಪ್ರಾಂಚೈಸಿ ಹರಾಜಿನಲ್ಲಿ ರುಪಾಯಿ 2 ಕೋಟಿ ನೀಡಿ ಖರೀದಿಸಿದ್ದ ಇಂಗ್ಲೆಂಡ್‌ ಬ್ಯಾಟ್ಸ್‌ ಮನ್ ಜೇಸನ್ ರಾಯ್ ಬಯೋಬಬಲ್ ಕಾರಣ ನೀಡಿ ಐಪಿಎಲ್ ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಐಪಿಎಲ್‌ ವೇಳೆ ಬಯೋಬಬಲ್‌ ನಲ್ಲಿ ಸುಧೀರ್ಘ ಅವಧಿ ಉಳಿಯಲು ಸಾಧ್ಯವಾಗುತಿಲ್ಲ ಎಂಬ ಕಾರಣ ನೀಡಿ ರಾಯ್ ಈ ಆವೃತಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪ್ರಾಂಚೈಸಿಯು ರಾಯ್ ಸ್ಥಾನಕ್ಕೆ ಬದಲಿ ಆಟಗಾರನ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಬಲಗೈ ಆಟಗಾರ ರಾಯ್‌ ಕೊನೆಯಕ್ಷಣದಲ್ಲಿ ಐಪಿಎಲ್ ನಿಂದ ಹೊರನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ, 2020ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅವರಿಗೆ ರುಪಾಯಿ 1.5 ಕೋಟಿ ನೀಡಿ ಖರೀದಿಸಿತ್ತು. ಆ ವೇಳೆ ಸಹ ರಾಯ್ ವೈಯಕ್ತಿಕ ಕಾರಣಗಳನ್ನು ನೀಡಿ ಐಪಿಎಲ್ ನಿಂದ ಹೊರಗುಳಿದಿದ್ದರು.

ಇತ್ತೀಚೆಗೆ ನಡೆದ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ರಾಯ್‌ ಉತ್ತಮ ಪ್ರದರ್ಶನ ನೀಡಿದ್ದರು. ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡದ ಪರ ಪರ ಗರಿಷ್ಠ ರನ್‌ ಕಲೆಹಾಕಿದ ಸಾಧನೆ ಮಾಡಿದ್ದರು. ಒಂದು ಶತಕ, ಎರಡು ಅರ್ಧಶತಕ ಸೇರಿದಂತೆ ಒಟ್ಟು 303 ರನ್ ಕಲೆಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!