ಭಾರತ ಫುಟ್ಬಾಲ್‌ ಫೆಡರೇಷನ್‌ ಮೇಲಿನ ನಿಷೇಧ ಹಿಂಪಡೆದ ಫೀಫಾ: ಭಾರತದಲ್ಲೇ ನಡೆಯಲಿದೆ ಮಹಿಳಾ ವಿಶ್ವಕಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್) ಮೇಲೆ ಹೇರಿದ್ದ ನಿಷೇಧವನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ (ಫಿಫಾ) ಹಿಂಪಡೆದಿದೆ. ಇದಿಂದಾಗಿ U-17 ಮಹಿಳಾ ವಿಶ್ವಕಪ್ ಭಾರತದಲ್ಲಿಯೇ ನಡೆಯುವುದು ಖಚಿತವಾದಂತಾಗಿದೆ.
ಮೂರನೇ ವ್ಯಕ್ತಿಗಳಿಂದ ಹೆಚ್ಚುತ್ತಿರುವ ಅನಗತ್ಯ ಪ್ರಭಾವʼ ಕಾರಣವೊಡ್ಡಿ ಫೀಫಾ ಭಾರತದ ಫುಟ್ಬಾಲ್‌ ಸಂಸ್ಥೆಯನ್ನು ಆ.15ರಂದು ಅಮಾನತು ಮಾಡಿತ್ತು. ಮತ್ತು U-17 ಮಹಿಳಾ ವಿಶ್ವಕಪ್ ಅನ್ನು ಈ ಹಿಂದೆ ಭಾರತದಲ್ಲಿ ಯೋಜಿಸಿದಂತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಎಐಎಫ್‌ಎಫ್‌ನ 85 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಮಾನತುಗೊಳಿಸುವಿಕೆಯು ನಡೆದಿತ್ತು. ಈ ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಏಟಿಎಫ್‌ ಆಡಳಿತಗಾರರ ಸಮಿತಿಯನ್ನು (ಸಿಒಎ) ಸೋಮವಾರ ವಿಸರ್ಜಿಸಲು ಆದೇಶ ನೀಡಿತ್ತು. ಇದರಿಂದ ಸಂತುಷ್ಟಗೊಂಡಿರುವ ಫೀಫಾ ಎಐಎಫ್‌ಎಫ್‌ನ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ.  ಕೇವಲ 11 ದಿನಗಳ ನಂತರ ಈ ನಿಷೇಧ ತೆರವಾಗಿದೆ. ಭಾರತವು ಫಿಫಾ ಟೂರ್ನಿಗೆ ಆತಿಥ್ಯ ವಹಿಸುತ್ತದೆ ಎಂದು ಖಚಿತಪಡಿಸಲು ತನ್ನ ಹಿಂದಿನ ಆದೇಶಗಳನ್ನು ಮಾರ್ಪಡಿಸಿದೆ. ಪರಿಣಾಮವಾಗಿ, 17 ಅಕ್ಟೋಬರ್ ರಿಂದ ನಡೆಯಲಿರುವ ಫೀಫಾ U-17 ಮಹಿಳಾ ವಿಶ್ವಕಪ್ ಯೋಜಿಸಿದಂತೆ ಭಾರತದಲ್ಲಿ ನಡೆಯಲಿದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನಿಷೇಧ ತೆರವು- ಎಲ್ಲಾ ಫುಟ್ಬಾಲ್ ಅಭಿಮಾನಿಗಳಿಗೆ ಗೆಲುವು! ಎಂದು ಬಣ್ಣಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!