ಹಿಗ್ಗಾಮುಗ್ಗ ಹೊಡೆದಾಡಿ ಕೇರಳದಲ್ಲಿ ವಿಶ್ವಕಪ್‌ ಕಾವು ಮತ್ತಷ್ಟು ಏರಿಸಿದ ಅರ್ಜೆಂಟೀನಾ vs ಬ್ರೆಜಿಲ್ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಧ್ಯಪ್ರಾಚ್ಯ ದೇಶ ಕತಾರ್‌ ನಲ್ಲಿ 2022ರ ಫೀಫ್‌ ಫುಟ್ಬಾಲ್‌ ವಿಶ್ವಕಪ್‌ ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಭಾರತದಲ್ಲಿ ಪ್ರಮುಖವಾಗಿ ಕೇರಳದಲ್ಲಿ ವಿಶ್ವಕಪ್‌ ಅನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತಿದೆ. ಅಲ್ಲಿ ಹಲವು ಫುಟ್ಬಾಲ್‌ ತಂಡಗಳ ಅಪ್ಪಟ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ನೇಮರ್‌, ಮೆಸ್ಸಿ, ರೊನಾಲ್ಡೋ ಸೇರಿದಂತೆ ತಮ್ಮ ನೆಚ್ಚಿನ ಆಟಗಾರರ ಕಟೌಟ್‌ ನಿಲ್ಲಿಸುವ ಮೂಲಕ ಕೇರಳ ಫ್ಯಾನ್ಸ್‌ ವಿಶ್ವಾದ್ಯಂತ ಸದ್ದು ಮಾಡಿದ್ದರು. ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗುತ್ತಿದ್ದು, ಬ್ರೆಜಿಲ್‌ ಹಾಗೂ ಅರ್ಜೆಂಟೀನಾ ಅಭಿಮಾನಿಗಳು ಹೊಡೆದಾಡಿಕೊಳ್ಳುವ ಮೂಲಕ ಕೇರಳದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಗೆ ಮತ್ತಷ್ಟು ಕಾವೇರಿಸಿದ್ದಾರೆ.
ಕೇರಳದ ಕೊಲ್ಲಂನ ಶಕ್ತಿಕುಲಂಗರ ಪ್ರದೇಶದಲ್ಲಿ ಸಾಗುತ್ತಿದ್ದ ರ್ಯಾಲಿಯೊಂದರಲ್ಲಿ ಬ್ರೆಜಿಲ್ ಮತ್ತು ಅರ್ಜೆಂಟೀನಾ ಅಭಿಮಾನಿಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!