FIFA WORLD CUP| ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡ ಅರ್ಜೆಂಟೀನಾ: 36 ವರ್ಷಗಳ ಕನಸು ನನಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂತೂ ನನಸಾಯ್ತು ಮೆಸ್ಸಿ, ಕನಸು. ರಣರೋಚಕ ಪಂದ್ಯದಲ್ಲಿ ಫ್ರಾನ್ಸ್‌ ಹಿಂದಿಕ್ಕಿ ಫಿಪಾ ವಿಶ್ವಪಕ್‌ ಅನ್ನು ಅರ್ಜೆಂಟೀನಾ ತನ್ನದಾಗಿಸಿಕೊಂಡಿದೆ. ನಿಗದಿತ ಸಮಯದಲ್ಲಿ ಎರಡೂ ತಂಡಗಳು ಸಮಾನ ಅಂಕಗಳನ್ನು ಗಳಿಸಿ ಮ್ಯಾಚ್‌ ಡ್ರಾ ಆಯಿತು. ಹೆಚ್ಚುವರಿ ಸಮಯದಲ್ಲೂ ಎರಡೂ ಪಂದ್ಯಗಳು ಸರಿಸಮಾನವಾಗಿ ಸೆಣಸಾಡಿವೆ, ಕೊನೆಗೆ ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಫ್ರಾನ್ಸ್ 2 ಅಂಕ ಗಳಿಸಿದರೆ, ಅರ್ಜೆಂಟೀನಾ 4 ಅಂಕ ಗಳಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. 36 ವರ್ಷಗಳ ತನ್ನ ಕನಸನ್ನು ಅರ್ಜೆಂಟೀನಾ ನನಸು ಮಾಡಿಕೊಂಡಿದೆ. ಅರ್ಜೆಂಟೀನಾ ತಂಡ ವಿಶ್ವ ಚಾಂಪಿಯನ್ ಆಗುವ ಮೂಲಕ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಕನಸು ನನಸಾಗಿದೆ.

ಭಾನುವಾರ ನಡೆದ ಈ ರೋಚಕ ಪಂದ್ಯದಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ನಿಗದಿತ ವೇಳೆಗೆ ಉಭಯ ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸಿದವು. ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಅನಿವಾರ್ಯವಾಗಿತ್ತು. ಇಲ್ಲಿ ಅರ್ಜೆಂಟೀನಾ ನಾಲ್ಕರಲ್ಲಿ ನಾಲ್ಕು ಗೋಲು ಗಳಿಸಿದರೆ, ಫ್ರಾನ್ಸ್ ನಾಲ್ಕರಲ್ಲಿ ಎರಡು ಗೋಲು ಗಳಿಸಿತು.  ಅರ್ಜೆಂಟೀನಾ ಪರ ಲಿಯೋನೆಲ್ ಮೆಸ್ಸಿ ಎರಡು ಗೋಲು ಗಳಿಸಿದರು (23 ಮತ್ತು 108ನೇ ನಿಮಿಷದಲ್ಲಿ). ಡಿ ಮರಿಯಾ ಗೋಲು ಗಳಿಸಿದರು (36ನೇ ನಿಮಿಷದಲ್ಲಿ). ಫ್ರಾನ್ಸ್ ಪರವಾಗಿ, ಎಂಬಪ್ಪೆ ಹ್ಯಾಟ್ರಿಕ್ ಗೋಲುಗಳನ್ನು (80, 81 ಮತ್ತು 118 ನೇ ನಿಮಿಷಗಳಲ್ಲಿ) ಗಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ಮೊದಲ 35 ನಿಮಿಷಗಳ ಕಾಲ ಮೇಲುಗೈ ಸಾಧಿಸಿತು. ಆದರೆ 80ನೇ ನಿಮಿಷದಿಂದ ಫ್ರಾನ್ಸ್‌ನ ತಾರೆ ಎಂಬಪ್ಪೆ ಒಂದು ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಹೆಚ್ಚುವರಿ ಸಮಯದ ದ್ವಿತೀಯಾರ್ಧದಲ್ಲಿ ಮೆಸ್ಸಿ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಎರಡು ನಿಮಿಷಗಳಲ್ಲಿ ಆಟ ಮುಗಿಯುತ್ತಿದ್ದಂತೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಮೂಲಕ ಎಂಬಪ್ಪೆ ಮತ್ತೊಮ್ಮೆ ಸ್ಕೋರ್ ಅನ್ನು ಸಮಗೊಳಿಸಿದರು. ಕೊನೆಯಲ್ಲಿ ಫ್ರಾನ್ಸ್‌ಗೆ ಗೋಲು ಗಳಿಸಲು ಮತ್ತೊಂದು ಅವಕಾಶ ಸಿಕ್ಕಿತಾದರೂ ಅರ್ಜೆಂಟೀನಾದ ಗೋಲ್‌ಕೀಪರ್ ಮಾರ್ಟಿನೆಜ್ ಬಾಲ್‌ ತಡೆದು ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ಗೆ ಕೊಂಡೊಯ್ದರು. ಗೋಲ್ ಕೀಪರ್ ಮಾರ್ಟಿನೆಜ್ ಪೆನಾಲ್ಟಿ ಶೂಟೌಟ್‌ನಲ್ಲಿ ಮತ್ತೆ ಅಡ್ಡಗೋಡೆಯಾಗಿ ನಿಂತು ಅರ್ಜೆಂಟೀನಾವನ್ನು ಗೆಲ್ಲುವಂತೆ ಮಾಡಿದರು.

ಅಂತಿಮ ಹಂತದವರೆಗೂ ಪಂದ್ಯ ರೋಚಕವಾಗಿತ್ತು. ಕೊನೆಯ ಗಳಿಗೆಯವರೆಗೂ ಟ್ವಿಸ್ಟ್‌ಗಳೊಂದಿಗೆ ಸಾಗಿದ ಈ ಪಂದ್ಯದಲ್ಲಿ ಕೊನೆಯ ಪಂಚ್‌ ಅರ್ಜೆಂಟೀನಾಗೆ ದಕ್ಕಿತು. 16 ವರ್ಷಗಳಿಂದ ಕಾಯುತ್ತಿದ್ದ ಮೆಸ್ಸಿ ಕನಸು ನನಸಾಯಿತು. ವೃತ್ತಿಜೀವನದಲ್ಲಿ ಕೊರತೆಯಿದ್ದ ಟ್ರೋಫಿಗೆ ಆನಂದದಿಂದ ಮುತ್ತಿಕ್ಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!